ಕುಶಾಲನಗರದಲ್ಲಿ ಹಿರಿಯ ಸಾಹಿತಿಗೆ ನುಡಿನಮನ
05/05/2020

ಮಡಿಕೇರಿ ಮೇ 5 : ನಾಡನ್ನು ಅಗಲಿದ ಸಾಹಿತ್ಯ ಕ್ಷೇತ್ರದ ಸಾರ್ವಭೌಮ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಪಟ್ಟಣದ ಮಾರುಕಟ್ಟೆ ರಸ್ತೆಯ ಕೃಷಿಕರ ಸಹಕಾರ ಭವನದಲ್ಲಿ ನಡೆಯಿತು. ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ನಿಸಾರ್ ಅಹಮದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ನಿವೃತ್ತ ಶಿಕ್ಷಕ ಎಂ.ಎಚ್.ನಜೀರ್ ಅಹಮದ್, ಎಂ.ಕೆ.ದಿನೇಶ್, ಎಸ್.ಎನ್.ನರಸಿಂಹ ಮೂರ್ತಿ, ಎನ್.ಕೆ.ಮೋಹನಕುಮಾರ್, ವಿ.ಎಸ್.ಆನಂದಕುಮಾರ್, ಕಾರ್ಯದರ್ಶಿ ಬಿ.ಬಿ.ಲೋಕೇಶ್, ವಿಜಯಕುಮಾರ, ರಾಜು, ಸಜಿ, ಕೆ.ಎಸ್.ಮೂರ್ತಿ ಮೊದಲಾದವರಿದ್ದರು.