ಹೆಬ್ಬಾಲೆಯಲ್ಲಿ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ : ಸಾರ್ವಜನಿಕರು ಬ್ಯಾಂಕಿಂಗ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ : ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಕರೆ

05/05/2020

ಮಡಿಕೇರಿ ಮೇ 5 : ಜಿಲ್ಲೆಯ 176 ಬ್ಯಾಂಕ್ ಶಾಖೆಗಳು ಜನಸೇವೆಗೆ ಸದಾಸಿದ್ದವಾಗಿದ್ದು ಜನರು ಬ್ಯಾಂಕಿಂಗ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಇತರರಿಗೂ ಸಹಾಯ ಮಾಡಲು ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡಿ ಎಂದು ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಕರೆ ನೀಡಿದ್ದಾರೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಟೋಚಾಲಕರಿಗೆ ವಲಸೆ ಕಾರ್ಮಿಕರಿಗೆ ಮತ್ತು ಕೋವಿಡ್-19 ಸಂತ್ರಸ್ಥರಿಗೆ ಬ್ಯಾಂಕ್ ಶಾಖೆಗಳ ವತಿಯಿಂದ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಜಿಲ್ಲೆಯ 55 ಸಾವಿರ ಖಾತೆಗಳಿಗೆ ಒಟ್ಟು ರೂ 2.80 ಕೋಟಿ ಹಣ ಬಂದಿದೆ. 2ನೇ ಕಂತು ಮೇ 8 ರಂದು ಬರಲಿದೆ ಎಂದು ಮಾಹಿತಿ ನೀಡಿದ ಅವರು ಯಾವುದೇ ಕಾರಣಕ್ಕೂ ಹಣ ವಾಪಾಸ್ಸು ಹೋಗುವುದಿಲ್ಲ ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಹಣ ಪಡೆಯಲು ಬ್ಯಾಂಕುಗಳಿಗೆ ಹೊಗಲೇಬೇಕೆಂದಿಲ್ಲ. ಬದಲಾಗಿ ಬ್ಯಾಂಕ್ ಮಿತ್ರರು ಅಥವಾ ನಿಮ್ಮೂರಿನ ಅಂಚೆ ಕಛೇರಿಯಲ್ಲಿ ಆಧಾರ್ ಆಧಾರಿತ ವ್ಯವಸ್ಥೆ ಇರುವ ಹಿನ್ನಲೆ ಹಣ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.
ಕೊರೋನಾ ಬಂದ ಹಿನ್ನಲೆಯಲ್ಲಿ ನಾವೆಲ್ಲಾರೂ ಒಂದು ರೀತಿಯಲ್ಲಿ ಆಸಹಾಯಕ ಪರಿಸ್ಥಿತಿಯನ್ನು ಎದುರುಸುತ್ತಿದ್ದು ಸಾಂಸ್ಕøತಿಕ ಪಲ್ಲಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಸಹಾಯದ ಅಗತ್ಯತೆ ಇರುವವರಿಗೆ ನಾವೇ ನೇರವಾಗಿ ನೀಡಿದಾಗ ಒಂದು ರೀತಿ ಆತ್ಮ ತೃಪ್ತಿ ಇರುತ್ತದೆ ಎಂದು ನುಡಿದ ಅವರು ಮಡಿಕೇರಿಯ ಆರ್ ಆರ್ ಆಸ್ಪತ್ರೆಯ ಡಾ. ಬಿ.ಸಿ.ನವೀನ್ ಕುಮಾರ್ ಅವರು ನಮಗೆ ಪ್ರೇರಣೆಯಾಗಿದ್ದಾರೆಂದು ಅಭಿಮಾನದಿಂದ ನುಡಿದರು.
ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಜೋತೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಜಿಲ್ಲಾಡಳಿತದ ಮೂಲಕ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕರೆನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಮಡಿಕೇರಿ ಆರ್.ಆರ್. ಆಸ್ಪತ್ರೆಯ ಮಕ್ಕಳ ತಜ್ಞರಾದ ಬಿ.ಸಿ.ನವೀನ್‍ಕುಮಾರ್ ಮಾತನಾಡಿ ಆರ್.ಕೆ.ಬಾಲಚಂದ್ರ ಅವರ ಮಾನವಿಯತೆ ಮತ್ತು ಹೃದಯವಂತಿಕೆಯಿಂದ ಈ ಭಾಗದ ಜನರಿಗೆ ಸಹಾಯ ಮಾಡಲು ಸಾಧ್ಯವಾಗಿದೆ ನಾವು ಪರಸ್ಪರ ಸಹಾಯಕ್ಕೆ ಆಗಬೇಕು ಇಲ್ಲಿ ಭಾಷೆ ಜಾತಿ ಧರ್ಮ ನಗಣ್ಯ ಎಂದು ಹೇಳಿದ ನಾವೀಗ 3ನೇ ಹಂತದ ಲಾಕ್‍ಡೌನ್ ಹಂತದಲ್ಲಿದ್ದೇವೆ ಮೊದಲ 2 ಜೀವ ಉಳಿಸುವ ಪ್ರಯತ್ನವಾಗಿದ್ದರೆ ಪ್ರಸುತ ಅವಕಾಶ ಜೀವನ ಸಾಗಿಸುವ ಪ್ರಯತ್ನಕ್ಕೆ ನೀಡಿದ ಅವಕಾಶವಾಗಿದೆ. ನಮ್ಮ ಜವಬ್ಧಾರಿ ಮರೆತರೆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರೆ ಜೂನ್ ಮತ್ತು ಜುಲೈನಲ್ಲಿ ಮತ್ತೆ ಕೋವಿಡ್-19 ವಿಪರೀತ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಸಿದರು.
ಬ್ಯಾಮಕ್ ಬರೋಡಾದ ಮುಖ್ಯ ವ್ಯವಸ್ಥಾಪಕರಾದ ಶ್ರೀನಿವಾಸ್ ಮೂರ್ತಿ ಅವರು ಮಾತನಾಡಿ ನಮ್ಮ ಸಾಮಾಜಿಕ ಹೊಣೆಗಾರಿಕೆ ಲೀಡ್ ಬ್ಯಾಂಕಿನ ಮನವಿಗೆ ಒಗೊಟ್ಟು ಮರಗೋಡು ಕುಶಾಲನಗರ, ಮಡಿಕೇರಿ ಮತ್ತು ನಂಜರಾಯಪಟ್ಟಣ ಶಾಖೆಗಳಿಂದ ಜೋತೆಗೆ ಲೀಡ್ ಬ್ಯಾಂಕ್ ಆದ ಕಾರ್ಪೋರೇಷನ್ ಬ್ಯಾಂಕ್ ಸೇರಿ ರೂ 40 ಸಾವಿರಿ ಮೌಲ್ಯದ ಈ ಕಿಟ್‍ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನಿಡಿದರು.
ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಸತೀಶ್ ಅವರು ಕಾರ್ಯಕ್ರಮ ಆಯೋಜಿಸಿ ಸಂತ್ರಸ್ಥರಿಗೆ ಸಹಾಯ ಮಾಡಿದ ಸರ್ವರಿಗೂ ದನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ರೂವಾರಿ ಮತ್ತು ಜಿಲ್ಲೆಯಾದ್ಯಂತ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿದ ಡಾ.ಬಿ.ಸಿ.ನವೀನ್ ಕುಮಾರ್ ಅವರನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡೊದ ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಅನು, ಜಯರಾಜ್, ಎಸ್.ಆರ್.ಕೆ.ರೆಡ್ಡಿ, ಪ್ರಕಾಶ್ ಲೀಡ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಮಚಂದ್ರ ನಾಯಕ್ ಸೇರಿದಂತೆ ಪ್ರಮುಖರಾದ ಹೈದರ್, ಮನುಕುಮಾರ್, ಗಣೇಶ್ ಕೂಡಿಗೆ ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಒಟ್ಟು 74 ಮಂದಿಗೆ ಆಹಾರ ಕಿಟ್‍ಗಳನ್ನು ಗಣ್ಯರು ವಿತರಿಸಿದರು.
ಹೆಬ್ಬಾಲೆಯ ಶಾಲಾ ಶಿಕ್ಷಕರಾದ ಸತೀಶ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
<<<ಬಾಕ್ಸ್>>>
ಭಾನುವಾರದಿಂದ ಆನೇಕ ಮಂದಿ ಗ್ರಾಹಕರು ತಮ್ಮಗೆ ಗುಪ್ತ ಎಂಬ ಹೆಸರಿನಿಂದ ಮೊಬೈಲ್ ಕರೆ ಬರುತ್ತಿದ್ದು ಒಟಿಪಿ ಸಂಖ್ಯೆ ಕೇಳಿದರೆ ಖಾತೆಗೆ ಹಣ ಹಾಕುತ್ತಾರೆ ಇದು ನಿಜವೇ ಎಂದು ಕೇಳುತ್ತಿದ್ದಾರೆ. ಆದರೆ ಇದು ಬಿಹಾರ ಮೂಲದ ಗುಪ್ತ ಎಂಬವವರ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಯಾಗಿದ್ದು ಯಾವುದೇ ಕಾರಣಕ್ಕೂ ಒಟಿಪಿ ಸಂಖಯೆಯಾಗಲಿ ಅಥವಾ ಇನ್ಯಾವುದೇ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳದಿರಿ ಎಂದು ಮನವಿ ಮಾಡಿದ ಅವರು ಈ ಸಂಖ್ಯೆ 6206387127 ಆಗಿದ್ದು ಇದು ಖಾತೆಗೆ ಕನ್ನಹಾಕುವ ತಂತ್ರದ ಭಾಗ ಎಂದು ಎಚ್ಚರಿಸಿದರು.