ಕುಶಾಲನಗರದಲ್ಲಿ ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ದಿನಸಿ ವಿತರಣೆ

05/05/2020

ಮಡಿಕೇರಿ ಮೇ 5 : ಕೊರೋನ ಲಾಕ್‍ಡೌನ್‍ನಿಂದ ಆಹಾರ ಸಾಮಾಗ್ರಿಗಳ ಕೊರತೆಯನ್ನು ಎದುರಿಸುತ್ತಿರುವ ವಿಕಲ ಚೇತನರು ಮತ್ತು ಹಿರಿಯ ನಾಗರಿಕರ ಸಮಸ್ಯೆಗೆ ಸ್ಪಂದಿಸಿ ಕುಶಾಲನಗರದ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರೇಮ್ ಚಂದ್ರನ್ ಅವರು ಕುಶಾಲನಗರದ ಮುಳ್ಳು ಸೋಗೆ, ಕೊಡಗರ ಹಳ್ಳಿ, ಸುಂಟಿಕೊಪ್ಪ, ಮಾದಾಪುರ, ಕುಂಬೂರು, ಇಗ್ಗೊಡ್ಲು, ಮಕ್ಕಳ ಗುಡಿ ಬೆಟ್ಟ, ಕುಂಬೂರು ಗ್ರಾಮಗಳಿಗೆ ಭೇಟಿ ನೀಡಿ ಸುಮಾರು 13 ಕುಟುಂಬದ ಸದಸ್ಯರಿಗೆ ಒಂದು ತಿಂಗಳಿಗೆ ಬೇಕಾಗುವ ದಿನಸಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ ಹಾಗೂ ಸುಂಟಿಕೊಪ್ಪ ಜೆಸಿಐ ನ ಅಧ್ಯಕ್ಷರಾದ ರಮೇಶ್, ಸ್ವಸ್ಥ ಶಾಲೆಯ ಸಿಬಿಆರ್ ಸಂಯೋಜಕ ಹಾಗೂ ಸುಂಟಿಕೊಪ್ಪ ಜೆಸಿಐ ನ ಕಾರ್ಯದರ್ಶಿ ಮುರುಗೇಶ್, ಸುಂಟಿಕೊಪ್ಪ ಅಂಚೆ ಕಚೇರಿ ಸಿಬ್ಬಂದಿ ಸಂದೀಪ್, ಮಾದಾಪುರ ಸಮಾಜ ಕಾರ್ಯಕರ್ತ ಧರ್ಮೇಂದ್ರ ಹಾಜರಿದ್ದರು.