ಕೊಡಗು ಜಿಲ್ಲಾ ಕಾಂಗ್ರೆಸ್‍ನಿಂದ ದಿನಗೂಲಿ ನೌಕರರಿಗೆ ತರಕಾರಿ ವಿತರಣೆ

05/05/2020

ಮಡಿಕೇರಿ ಮೇ 5 : ಕೊಡಗು ಜಿಲ್ಲೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರ, ನಾಪೆÇೀಕ್ಲು ಬ್ಲಾಕ್ ನ ಚೆಂಬು ಗ್ರಾಮದ ಬಾಲಂಬಿ, ಆನ್ಯಾಳ, ಊರುಬೈಲು ಹಾಗೂ ಬೊಳುಗಲ್ಲು ಗುಡ್ಡೆ ಭಾಗದ ಎಸ್ಸಿ,ಎಸ್ಟಿ ಕಾಲೋನಿ, ಪೂಜಾರಿ ಕಾಲೋನಿ ಹಾಗೂ ದಿನಗೂಲಿ ನೌಕರರ ಸುಮಾರು 100ಕ್ಕೂ ಅಧಿಕ ಕುಟುಂಬಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಅವರ ನೇತೃತ್ವದಲ್ಲಿ ತರಕಾರಿಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಅವರು, ಗ್ರಾಮಸ್ಥರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೇ ಅಗತ್ಯವಿದ್ದಲ್ಲಿ ಪಕ್ಷದ ಸಹಾಯವಾಣಿÉ (9741701078)ಗೆ ಕರೆ ಮಾಡುವಂತೆ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾ. ಪಂ. ಸದಸ್ಯರಾದ ಎನ್.ಸಿ ಮನೋಹರ್, ರಘುನಾಥ್ ಬಾಲಂಬಿ, ವಲಯ ಅಧ್ಯಕ್ಷ ಕೆ.ಸಿ ಸುರೇಶ, ಕಾರ್ಯದರ್ಶಿ ಆಂಟೋನಿ, ದಿನೇಶ್ ರೆಂಕಿಲ್ ಮೊಟ್ಟೆ, ಫಕೀರ, ಹಾರಂಬಿ ಅರುಣೋದಯ ಕುಮಾರ್, ತೆಂಕಿಲ ಮಿಥುನ್ ಹಾಗೂ ಇತರರು ಹಾಜರಿದ್ದರು.