ಹೈಕೋರ್ಟ್ ರಿಜಿಸ್ಟ್ರಾರ್ ಆಗಿ ಕೆ.ಎಸ್.ಭರತ್ ಕುಮಾರ್ ನೇಮಕ

05/05/2020

ಮಡಿಕೇರಿ ಮೇ.05: ಮೈಸೂರಿನಲ್ಲಿ 3 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಭರತ್ ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್ ಸ್ಟಾಟಸ್ಟಿಕಲ್ ರಿಜಿಸ್ಟ್ರಾರ್ ಆಗಿ ನೇಮಿಸಲಾಗಿದೆ ಎಂದು ಹೈಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
2015 ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ ಕೆ.ಎಸ್.ಭರತ್ ಕುಮಾರ್ ಅವರು ಕಳೆದ ಒಂದು ವರ್ಷದಿಂದ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಹೈಕೋರ್ಟ್‍ನಲ್ಲಿ ರಿಜಿಸ್ಟ್ರಾರ್ ಆಗಿ ನೇಮಕಗೊಳ್ಳುವ ಮೂಲಕ ಉನ್ನತ ಹುದ್ದೆ ಪಡೆದಿರುತ್ತಾರೆ.
ಕೆ.ಎಸ್.ಭರತ್ ಕುಮಾರ್ ಅವರು ವೀರಾಜಪೇಟೆಯವರಾಗಿದ್ದು, ಜಿಲ್ಲಾ ಪರಿಷತ್ ಮಾಜಿ ಸದಸ್ಯರು ಹಾಗೂ ರಾಜ್ಯ ಕುರುಬರ ಸಂಘದ ಕಾರ್ಯಾಧ್ಯಕ್ಷರಾದ ಕೆ.ಬಿ.ಶಾಂತಪ್ಪ ಮತ್ತು ರತ್ನಮ್ಮ ಅವರ ಪುತ್ರರಾಗಿದ್ದಾರೆ.