ಶನಿವಾರಸಂತೆಯಲ್ಲಿ ಬೈಕ್, ಪಿಕಪ್ ಡಿಕ್ಕಿ : ಓರ್ವ ಸಾವು

05/05/2020

ಮಡಿಕೇರಿ ಮೇ 5 : ಬೈಕ್ ಹಾಗೂ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರಸಂತೆ ಪಟ್ಟಣದಲ್ಲಿ ನಡೆದಿದೆ.
ಮೃತರನ್ನು ವಿಜಯ್ ಕೌಕೋಡಿ ಹಾಗೂ ಗಾಯಾಳುವನ್ನು ಮುಜಾಹಿದ್ ಎಂದು ಗುರುತಿಸಲಾಗಿದೆ.
ಮಂಗಳವಾರ ಇವರಿಬ್ಬರೂ ಬೈಕ್‍ನಲ್ಲಿ ಶನಿವಾರಸಂತೆಗೆ ಬಂದಿದ್ದು, ಪಟ್ಟಣದ ಕೆ.ಆರ್.ಸಿ ವೃತ್ತದ ಕಡೆ ತೆರಳುತ್ತಿದ್ದ ಪಿಕಪ್ ಹಾಗೂ ಕೆ.ಆರ್.ಸಿ ವೃತ್ತದಿಂದ ಗುಡುಗಳಲೆ ಕಡೆಗೆ ಸಾಗುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ಬೈಕ್ ಚಾಲಿಸುತ್ತಿದ್ದ ವಿಜಯ್ ಸ್ಥಳದಲ್ಲೇ ಸಾವಿಗೀಡಾದರೆ ಮುಜಾಹಿದ್ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.