ಸಮುದಾಯ ಪ್ರಸರಣದ ಹಂತ ತಲುಪಿಲ್ಲ
06/05/2020

ನವದೆಹಲಿ ಏ.5 : ಕೋವಿಡ್-19 ಸಮುದಾಯ ಪ್ರಸರಣದ ಹಂತ ತಲುಪಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ ಸೋಂಕಿನ ಬಗೆಗಿನ ನಡವಳಿಕೆಗಳಲ್ಲಿನ ಬದಲಾವಣೆಗಳು ಹೊಸ ಆರೋಗ್ಯಕರ ಸಮಾಜಕ್ಕೆ ಸಾಮಾನ್ಯ ಎಂಬಂತಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ದೇಶವಾಸಿಗಳು ತಮ್ಮ ದೈನಂದಿನ ಜೀವನದಲ್ಲಿ ಕೈಗಳನ್ನು ಶುಚಿಯಾಗಿಟ್ಟುಕೊಂಡು, ಶುದ್ಧ ಗಾಳಿ ಮತ್ತು ಪರಿಸರ ನೈರ್ಮಲ್ಯ ಸಂರಕ್ಷಣೆಯ ಅಭ್ಯಾಸ ಮಾಡಿಕೊಂಡರೆ ಮಾರಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಆರ್ಥಿಕತೆಯಂತೆ ಆರೋಗ್ಯವೂ ಮುಖ್ಯವಾಗಿದೆ ಎಂದು ಹೇಳುವ ಮೂಲಕ ಮೇ 17ರವರೆಗೂ ವಿಸ್ತರಣೆಯಾಗಿರುವ ಲಾಕ್ ಡೌನ್ ಮಹತ್ವವನ್ನು ಒತ್ತಿ ಹೇಳಿದ ಸಚಿವರು, ಸರ್ಕಾರ ಸಮತೋಲನದಿಂದ ವರ್ತಿಸುತ್ತಿದೆ ಎಂದಿದ್ದಾರೆ.