ಮದ್ಯದ ಬೆಲೆ ಶೇ.25 ರಷ್ಟು ಏರಿಕೆ

06/05/2020

ಅಮರಾವತಿ ಮೇ 5 : ಆಂಧ್ರಪ್ರದೇಶದ ಸರ್ಕಾರ ಮದ್ಯಸೇವನೆಯನ್ನು ತಡೆಗಟ್ಟುವುದಕ್ಕೆ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ.
ಮೇ.04 ರಂದು ಆಂಧ್ರದಲ್ಲಿ ಮದ್ಯದ ಅಂಗಡಿಗಳು ತೆರೆಯಲ್ಪಟ್ಟಿದ್ದವು. ಶೇ.25 ರಷ್ಟು ಬೆಲೆ ಏರಿಕೆ ಮಾಡಲಾಗಿತ್ತು. ಆದರೆ ಬೆಲೆ ಏರಿಕೆ ಮದ್ಯಪ್ರಿಯರನ್ನು ಖರೀದಿಯಿಂದ ಹಿಂದೆ ಸರಿಯುವಂತೆ ಮಾಡಲು ವಿಫಲವಾಗಿತ್ತು. ಪರಿಣಾಮ ಬೃಹತ್ ಸಂಖ್ಯೆಯಲ್ಲಿ ಮದ್ಯಪ್ರಯರು ಮದ್ಯ ಖರೀದಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ.
ಮದ್ಯದ ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತ ಹಿನ್ನೆಲೆಯಲ್ಲಿ ಕೊರೋನ ಹರಡುವ ಆತಂಕ ಎದುರಾಗಿ ಮದ್ಯದ ಬೆಲೆಯನ್ನು ಶೇ.50 ರಷ್ಟು ಏರಿಕೆ ಮಾಡಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.