ಜರ್ನಲಿಸ್ಟ್’ಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಲಭ್ಯ
06/05/2020

ನ್ಯೂಯಾರ್ಕ್ ಮೇ 5 : ಲಾಕ್ ಡೌನ್ ವೇಳೆಯ ಕಾಶ್ಮೀರ ಚಿತ್ರೀಕರಿಸಿದ್ದ ಮೂವರು ಭಾರತೀಯ ಫೋಟೋ ಜರ್ನಲಿಸ್ಟ್’ಗಳಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು (370) ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಒಂದು ವರ್ಷದ ವರೆಗೆ ಕಣಿವೆ ರಾಜ್ಯವನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಕಪ್ರ್ಯೂ ವಿಧಿಸಿತ್ತು.
ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಪಿ ಸುದ್ದಿಸಂಸ್ಥೆಗೆ ಕಾರ್ಯನಿರ್ವಹಿಸುತ್ತಿದ್ದ ದಾರ್ ಯಾಸೀನ್, ಮುಕ್ತಾರ್ ಖಾನ್ ಮತ್ತು ಚನ್ನಿ ಆನಂದ್ ಅವರು ತೆಗೆಯಲಾಗಿದ್ದ ಛಾಯಾಚಿತ್ರಗಳು (ಈeಚಿಣuಡಿe Phoಣos) ಅವರಿಗೆ ಪುಲಿಟ್ಜರ್ ಪ್ರಶಸ್ತಿ ತಂದು ಕೊಟ್ಟಿವೆ.