ಪರಿಶಿಷ್ಟ ಜಾತಿಯ ಬಡ ಕುಟುಂಬಗಳಿಗೆ ದಿನಸಿ ನೆರವು

06/05/2020

ಮಡಿಕೇರಿ ಮೇ 6 : ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ನಾಪೋಕ್ಲು ಬಾಪೂಜಿ ವಠಾರದÀ ಪರಿಶಿಷ್ಟ ಜಾತಿಯ ಎಲ್ಲಾ ಬಡ ಕುಟುಂಬಗಳಿಗೆ ಉದ್ಯಮಿಗಳಾದ ಕಾರ್ತಿಕ್ ಸುಬ್ಬಯ್ಯ ಹಾಗೂ ಮಮತಾ ಸುಬ್ಬಯ್ಯ ಅವರ ನೆರವಿನಿಂದ ಅಗತ್ಯ ವಸ್ತುಗಳಾದ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ನಾಪೋಕ್ಲು ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷ ಸಾಬ ತಿಮ್ಮಯ್ಯ, ಸದಸ್ಯ ರೋಶನ್, ಹಿರಿಯರಾದ ಹರೀಶ್ ಅವರು ಬಡ ಕುಟುಂಬಗಳಿಗೆ ದಿನಸಿ ಹಂಚಿಕೆ ಮಾಡಿದರು.