ದುಂದುವೆಚ್ಚದ ಮದುವೆ ಬೇಡ : ಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡಿ

07/05/2020

ಮಡಿಕೇರಿ ಮೇ 7 : ಕಾಫಿ ನಾಡು ಕೊಡಗಿನಲ್ಲಿ ಕೊರೋನಾ ಲಾಕ್ ಡೌನ್ ನಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಸರಳ ವಿವಾಹಗಳು ಇತರರಿಗೆ ಮಾದರಿಯಾಗುತ್ತಿದೆ. ದುಂದು ವೆಚ್ಚ ಮಾಡಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವ ಬದಲು ಅದೇ ಹಣದಿಂದ ಮದುವೆ ಮನೆಯವರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವುದು ಸೂಕ್ತವೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ ಅಭಿಪ್ರಾಯಪಟ್ಟಿದ್ದಾರೆ.