ಕಾರ್ಮಿಕರ ಕಲಹ ಕೊಲೆಯಲ್ಲಿ ಅಂತ್ಯ : ಗುಹ್ಯ ಗ್ರಾಮದಲ್ಲಿ ಘಟನೆ

May 7, 2020

ಮಡಿಕೇರಿ ಮೇ 7 : ಕೂಲಿ ಕಾರ್ಮಿಕರಿಬ್ಬರು ಬಡಿದಾಡಿಕೊಂಡು ಓರ್ವ ಮೃತಪಟ್ಟಿರುವ ಘಟನೆ ವೀರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದಲ್ಲಿ ನಡೆದಿದೆ. ಚಂದ್ರ ಎಂಬಾತನೇ ಮೃತ ವ್ಯಕ್ತಿಯಾಗಿದ್ದಾನೆ. ಆರೋಪಿ ರವಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇಬ್ಬರು ಕೇರಳ ಮೂಲದವರಾಗಿದ್ದು ಕೂಲಿ ಕೆಲಸಕ್ಕಾಗಿ ಗುಹ್ಯ ಗ್ರಾಮಕ್ಕೆ ಆಗಮಿಸಿದ್ದರು. ಮದ್ಯದ ಮತ್ತಿನಲ್ಲಿ ಇಬ್ಬರ ನಡುವೆ ಕಲಹ ನಡೆದಿದೆ ಎಂದು ಹೇಳಲಾಗಿದೆ.