ಜಿಲ್ಲಾಡಳಿತದ ಕ್ರಮಗಳ ಬಗ್ಗೆ ಡಾ.ದುರ್ಗಾಪ್ರಸಾದ್ ಮೆಚ್ಚುಗೆ

ಮಡಿಕೇರಿ ಮೇ 7 : ಕೊಡಗನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾರ್ಪಡು ಮಾಡುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಪಟ್ಟ ಶ್ರಮ ಶ್ಲಾಘನಾರ್ಹವೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್ವಾದಿ) ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಇ.ರಾ.ದುರ್ಗಾಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಳೆದೆರಡು ತಿಂಗಳುಗಳಿಂದ ಮನೆ ಮನೆಗೆ ತೆರಳಿ ಹೊರ ದೇಶ ಮತ್ತು ರಾಜ್ಯಗಳಿಂದ ಬಂದವರ ಬಗ್ಗೆ ಮಾಹಿತಿ ಕಲೆಹಾಕಿ ಜಿಲ್ಲಾಡಳಿತಕ್ಕೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಸರಕಾರಿ ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡುವಲ್ಲಿ ಶುಚಿ ಮಾಡುವ ಸಿಬ್ಬಂದಿಗಳು ಪ್ರಾಮಾಣಿಕವಾಗಿ ದುಡಿಯುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಖಾಯಂ ನೌಕರರಿಗೆ ನೀಡುವ ವೇತನÀ ಮತ್ತು ಸೌಕರ್ಯವನ್ನು ನೀಡಬೇಕು ಎಂದು ದುರ್ಗಾಪ್ರಸಾದ್ ಮನವಿ ಮಾಡಿದರು.
ಪೊಲೀಸರು ಹಾಗೂ ಗೃಹ ರಕ್ಷಕ ದಳದ ನೌಕರರ ಶ್ರಮವನ್ನು ಕೂಡ ಅವರು ಇದೇ ಸಂದರ್ಭ ಸ್ಮರಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಂಘಟನಾ ಸಮಿತಿ ಸದಸ್ಯ ಎ.ಸಿ.ಸಾಬು ಉಪಸ್ಥಿತರಿದ್ದರು.