ಕೀ ಉತ್ತರಗಳು ವೆಬ್‍ಸೈಟ್‍ನಲ್ಲಿ ಪ್ರಕಟ

08/05/2020

ಬೆಂಗಳೂರು ಮೇ 7 : ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಕೀ ಉತ್ತರಗಳನ್ನು(ಇಂಗ್ಲಿಷ್‍ಹೊರತುಪಡಿಸಿ) ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.
ಈ ಉತ್ತರಗಳಲ್ಲಿ ಏನಾದರೂ ಲೋಪದೋಷ ಕಂಡುಬಂದಲ್ಲಿ ವಿದ್ಯಾರ್ಥಿಗಳು ಅಥವಾ ಉಪನ್ಯಾಸಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೊರೋನಾ ಲಾಕ್‍ಡೌನ್‍ಘೋಷಣೆಯಾಗಿದ್ದರಿಂದ ಇಂಗ್ಲಿಷ್‍ಪರೀಕ್ಷೆಯನ್ನು ನಡೆಸುವುದು ಸಾಧ್ಯವಾಗಿಲ್ಲ. ಪರೀಕ್ಷೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ವೆಬ್ ಸೈಟ್ ವಿಳಾಸ :(https;//dpue-exam.karnataka.gov.in/SOV_2020/)