ಹೋಟೆಲ್ ಬಾಡಿಗೆ ದರ ಪರಿಷ್ಕರಣೆ

08/05/2020

ಬೆಂಗಳೂರು ಮೇ 7 : ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಸಲುವಾಗಿ ಸೋಂಕಿತರನ್ನು ಕ್ವಾರಂಟೈನಲ್ಲಿ ಇರಿಸಲು ಸಾಮಾನ್ಯ ದರ್ಜೆಯ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಕ್ಯಾಂಪ್ಸ್ ಗಳನ್ನು ತೆರೆಯಲು ಹೋಟೆಲ್ ಬಾಡಿಗೆ ದರವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿ ನಿಗದಿಪಡಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ ಉಟ ಸೇರಿದಂತೆ ಗರಿಷ್ಠ ಕೊಠಡಿ ಬಾಡಿಗೆ ರೂ. 1, 200, ಇತರೆ ಮುನ್ಸಿಪಾಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ರೂ. 900 ಹಾಗೂ ಪುರಸಭೆ ವ್ಯಾಪ್ತಿಯನ್ನೊಳಗೊಂಡಂತೆ ರಾಜ್ಯದ ಇತರ ಎಲ್ಲಾ ಪ್ರದೇಶಗಳಲ್ಲಿ ರೂ. 750 ನಿಗದಿಪಡಿಸಲಾಗಿದೆ.
ಕ್ವಾರಂಟೈನ್ ಕ್ಯಾಂಪ್ಸ್ ಗಳನ್ನು ತೆರೆಯಲು ಕೆಲವೊಂದು ಷರತ್ತುಗಳು ಅನ್ವಯವಾಗಲಿದೆ. ಹೋಟೆಲ್ ಗಳ ಸೂಕ್ತತೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಬೇಕು, ಹೋಟೆಲ್ ಮತ್ತು ಅವರ ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಮಾಸ್ಕ್ ಮತ್ತು ನೈರ್ಮಲ್ಯೀಕರಣದ ಸೇವೆಗಳನ್ನು ಒಳಗೊಂಡ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕು.