ಜಿಲ್ಲಾಡಳಿತಕ್ಕೆ ಫೇಸ್ ಶೀಲ್ಡ್ ಮಾಸ್ಕ್ ಹಸ್ತಾಂತರ

08/05/2020

ಮಡಿಕೇರಿ ಮೇ 8 :  ಕೊಡಗು ಜಿಲ್ಲೆಯ ಕೊರೋನಾ ವಾರಿಯರ್ಸ್‌ ಗಳಿಗೆ ವಿರಾಜಪೇಟೆಯ ಅನುರಾಧಾ ಫೌಂಡೇಷನ್ ಸಹಯೋಗದೊಂದಿಗೆ ಸೇವಾ ಭಾರತಿ, ಕೊಡಗು ಸಂಸ್ಥೆಯ ಸ್ವಯಂಸೇವಕರು ತಯಾರಿಸಿದ ಫೇಸ್ ಶೀಲ್ಡ್ ಮಾಸ್ಕ್ ಗಳನ್ನು ಜಿಲ್ಲಾಧಿಕಾರಿಗಳ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಹಸ್ತಾಂತರಿಸಲಾಯಿತು.
ಕೊಡಗು ಜಿಲ್ಲೆಯ ವೈದ್ಯರು, ದಾದಿಯರು ಮತ್ತು ಆರಕ್ಷರಿಗೆ ಅವಶ್ಯಕತೆ ಇರುವಂತಹ ಫೇಸ್ ಶೀಲ್ಡ್ ಮಾಸ್ಕ್ ಗಳನ್ನು ಕುಶಾಲನಗರದ ಸೇವಾ ಭಾರತಿ ಸ್ವಯಂಸೇವಕರು ಸಮಾಜ ಸೇವಕಿ ಸಲೀಲ ಪಾಟ್ಕರ್ ಅವರ ಮಾರ್ಗದರ್ಶನದಲ್ಲಿ ಸುಮಾರು 5000 ಮಾಸ್ಕ್ ಗಳನ್ನು ತಯಾರಿಸಲಾಗಿತ್ತು. ಇಂದು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭ ಅನುರಾಧಾ ಫೌಂಡೇಷನ್ ನ ಟ್ರಸ್ಟಿ ಬಿನೂ ಜಾರ್ಜ್, ಸಮಾಜ ಸೇವಕಿ ಸಲೀಲ ಪಾಟ್ಕರ್, ಸೇವಾ ಭಾರತಿ ಉಪಾಧ್ಯಕ್ಷ ಕೆ.ಕೆ.ಮಹೇಶ್ ಕುಮಾರ್, ಖಜಾಂಚಿ ಡಿ.ಹೆಚ್.ತಮ್ಮಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ.ಕೆ.ದಿನೇಶ್ ಕುಮಾರ್, ಜಿಲ್ಲಾ ಪ್ರಚಾರಕ್ ಶ್ರೀನಿಧಿ, ಸ್ವಯಂಸೇವಕರಾದ ಲಕ್ಷ್ಮಿನಾರಾಯಣ, ಚಂದ್ರ ಉಡೋತ್ ಹಾಗೂ ಇತರರು ಇದ್ದರು.