ಪಾಲಿಬೆಟ್ಟದಲ್ಲಿ ಗುಡುಗು ಸಹಿತ ಗಾಳಿ ಮಳೆ : ಮನೆಗೆ ಹಾನಿ

08/05/2020

ಮಡಿಕೇರಿ ಮೇ 8 : ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ಬೆಳಗ್ಗೆ ಗುಡುಗು ಸಹಿತ ಗಾಳಿ ಮಳೆಯಾಗಿದೆ.
ತೋಟವೊಂದರ ಲೈನ್ ಮನೆಯ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು ಹಾನಿಯಾಗಿದೆ. ಮನೆಯಲ್ಲಿ 40 ಮಂದಿ ವಾಸವಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದರೆ ದೇವಪುರ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಅವರ ಮನೆಯಲ್ಲಿದ ಟಿವಿ, ಫ್ರಿಡ್ಜ್ ನೀರು ಪಾಲಾಗಿದೆ. ಗ್ರಾಮಸ್ಥರು ಗಾಳಿ ಮಳೆಯಿಂದ ಆತಂಕಗೊಂಡರು.