ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ವಾಹನ ಚಾಲಕರಿಗೆ ದಿನಸಿ ಕಿಟ್ ಹಾಗೂ ಮಾಸ್ಕ್ ವಿತರಣೆ

08/05/2020

ಮಡಿಕೇರಿ ಮೇ 8 :  ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ ಅವರ ದ್ಯೇಯೋದ್ದೇಶಗಳಿಗೆ ಅನುಸಾರವಾಗಿ ನಡೆಯುತ್ತಿದ್ದು, ದೇವಾಲಯದಲ್ಲಿ ದೇವರ ಭಜನೆ ಪೂಜೆ ನಡೆಯುವಷ್ಟೆ, ಬಡಜನರಿಗೆ, ಆಹಾರವನ್ನು ಅಗತ್ಯವಿದ್ದವರಿಗೆ ನೀಡತಕ್ಕದ್ದು, ತನ್ನ ಆತ್ಮದ ಉನ್ನತಿಗೆ ಪ್ರಯತ್ನ ಪಡುವುದರ ಜತೆಗೆ ಸಮಾಜದ ಕಲ್ಯಾಣಕ್ಜಾಗಿ ದುಡಿಯತಕ್ಕದ್ದು
ಎನ್ನುವ ಆಶಯದಂತೆ ಆಶ್ರಮದ ವತಿಯಿಂದ ಚಾಲಕರುಗಳಿಗೆ ದಿನನಿತ್ಯ ಗೃಹೋಪಯೋಗಿ ವಸ್ತುಗಳ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಗುತ್ತಿದೆ ಎಂದು  ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ‌ಬೋಧಸ್ವರೂಪಾನಂದಜೀ ಮಹರಾಜ್ ನುಡಿದರು.

ಅವರು ಶ್ರೀ ರಾಮಕೃಷ್ಣ ಆಶ್ರಮ, ಕುಟ್ಟಾದ ಅನುಗ್ರಹ ಸರ್ವೀಸ್ ಸೆಂಟರ್, ಬಾಡಗದ ಬ್ಯಾಂಕ್ ಆಫ್ ಬರೋಡ ( ವಿಜಯಾ ಬ್ಯಾಂಕ್‌) ಸಹಕಾರದಿಂದ ಕುಟ್ಟ ಗ್ರಾಮದ ಆಟೋ, ಕಾರು, ಜೀಪು, ವ್ಯಾನ್ ಮತ್ತು ಲಾರಿ ಚಾಲಕರುಗಳಿಗೆ ದಿನನಿತ್ಯ ಗೃಹೋಪಯೋಗಿ ವಸ್ತುಗಳ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿದರು.

ಪ್ರಪಂಚಕ್ಕೆ ಮಾಹಾಮಾರಿಯಾಗಿ ಬಂದಿರುವ ಕೊರೊನಾವನ್ನು ನಿಷ್ಕ್ರಿಯ ಗೊಳಿಸುವ ಕಡೆಗೆ ನಾವು ಸಾಗಬೇಕು ಮತ್ತು ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು. ಜನಜೀವನ ಕಷ್ಟದಲ್ಲಿ ಸಾಗುತ್ತಿದೆ. ವಾಹನ ಚಾಲಕರು ಮತ್ತು ದಿನನಿತ್ಯ ಕೆಲಸದಿಂದಲೇ ಜೀವನ ಸಾಗಿಸುವಂತಹವರಿಗೆ ಆಶ್ರಮದ ವತಿಯಿಂದ ಸಾದ್ಯವಾದಷ್ಟು ಸಹಾಯ ಮಾಡುತ್ತಿರುವುದಾಗಿ ನುಡಿದರು.
ಈಗಾಗಲೇ ಜಿಲ್ಲೆಯ ಆಟೋಚಾಲಕರಿಗೆ, ಜಿಲ್ಲೆಯ ಹಲವು ಗ್ರಾಮಗಳ ಬಡಬಗ್ಗರಿಗೆ ಆಶ್ರಮದಿಂದ ಆಹಾರದ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಲಾಗಿದೆ ಎಂದರು.

ಅನುಗ್ರಹ ಸರ್ವೀಸ್ ಸ್ಟೇಷನ್ ನ ಚಂದನ್ ಕಾಮತ್  ಮಾತನಾಡಿ, ಶ್ರೀ ರಾಮಕೃಷ್ಣ ಆಶ್ರಮವು ಜನರ ಸಂಕಷ್ಟದ ಸಮಯದಲ್ಲಿ ಅವರಿಗೆ ಬೇಕಾದ ಸಹಾಯ ಹಸ್ತ ನೀಡುತಿದೆ.  ಶ್ರೀ ರಾಮಕೃಷ್ಣ ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಿ ಮುಂದೆ ಕಷ್ಟ ದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದರು.
130 ಕಾರು, ಜೀಪು, ವ್ಯಾನ್ ಮತ್ತು ಲಾರಿ ಚಾಲಕರುಗಳಿಗೆ ದಿನನಿತ್ಯದ ಆಹಾರದ ಕಿಟ್, ಮಾಸ್ಕ್ ಮತ್ರು ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುಟ್ಟಾ ವೃತ್ತ ಪೋಲಿಸ್ ನಿರೀಕ್ಷಕ ಪರಶಿವಮೂರ್ತಿ, ಉಪ ನಿರೀಕ್ಷಕ ಚಂದ್ರಪ್ಪ, ಬಾಡಗದ ಬ್ಯಾಂಕ್ ಆಫ್ ಬರೋಡ ( ವಿಜಯಾ ಬ್ಯಾಂಕ್‌) ದ ವ್ಯವಸ್ಥಾಪಕ ಅಮಿತ್, ಅರವಿಂದ್, ಉದಯ, ಫೌವಜಿಯ, ಕುಟ್ಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಮಕೃಷ್ಣ, ಕಾಫಿ ಬೆಳೆಗಾರರಾದ ಚಕ್ಕೇರ ಧರ್ಮಜ ದೇವಯ್ಯ, ಪೆಮ್ಮಣಮಾಡ ನವೀನ್, ಚಕ್ಕೇರ ಗಣಪತಿ, ರಾಜಾ,ಒಮನಾ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ಎಂ.ಪಿ.ಕೇಶವ ಕಾಮತ್ , ಅನುಗ್ರಹ ಸರ್ವೀಸ್ ಸ್ಟೇಷನ್ ನ ಪ್ರತಾಪ್, ಅಜಯ್‌, ಗಿರೀಶ್, ಕುಟ್ಟ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಮತ್ತು ಎಲ್ಲ ಸದಸ್ಯರ ಉಪಸ್ಥಿತರಿದ್ದರು.

ಕೇಶವ ಕಾಮತ್ ಸ್ವಾಗತಿಸಿ ರಾಮಕೃಷ್ಣ ವಂದಿಸಿದರು.
ನಂತರ ಕುಟ್ಟಾದ ಸಿಂಕೋನ ಕಾಲೋನಿಯಲ್ಲಿ 120 ಜನರಿಗೆ ದಿನನಿತ್ಯದ ಆಹಾರದ ಕಿಟ್, ಮಾಸ್ಕ್ ಮತ್ರು ಸ್ಯಾನಿಟೈಸರ್ ವಿತರಿಸಲಾಯಿತು. ಮತ್ತು ಸರಕಾರದಿಂದ ಜೆ.ಕೆ ಅಹಾರದ ಕಿಟ್ ಪಡೆದಿರುವ 82 ಫಲಾನುಭವಿಗಳಿಗೆ ಸೋಪು, ಪೇಸ್ಟ್, ಈ ರೀತಿಯ ದಿನವಹಿ ಉಪಯೋಗದ 10 ವಸ್ತು ಗಳುಳ್ಳ ಕಿಟ್ ಸಹ ನೀಡಲಾಯಿತು.