ಗೋಣಿಕೊಪ್ಪ ಕೀರೆಹೊಳೆ ಕಾಮಗಾರಿ ಅಸಮರ್ಪಕ : ಸಾರ್ವಜನಿಕರ ಆರೋಪ

08/05/2020

ಮಡಿಕೇರಿ ಮೇ 8 : ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀರೆಹೊಳೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಆದರೆ ಕಾಮಗಾರಿ ಅಸಮರ್ಪಕವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿವರ್ಷ ಮಳೆಗಾಲ ಕೀರೆಹೊಳೆ ತುಂಬಿ ಹರಿದು ಪ್ರವಾಹ ಏರ್ಪಡುತ್ತಿದೆ. ಈ ಕಾರಣದಿಂದ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆಯಾದರೂ ಯಂತ್ರ ಬಳಸಿ ಅವೈಜ್ಞಾನಿಕ ರೂಪದಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಪರಿಪೂರ್ಣವಾದ ಕಾಮಗಾರಿ ನಡೆಯದೇ ಇರುವುದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎನ್ನುವ ಅಸಮಾಧಾನ ಕೇಳಿ ಬಂದಿದೆ.