ಎಲ್ಲರ ಸಹಕಾರದಿಂದ ಕೊಡಗು ಕೊರೋನಾ ಮುಕ್ತವಾಗಿದೆ : ಶಾಸಕ ಅಪ್ಪಚ್ಚುರಂಜನ್

08/05/2020

ಮಡಿಕೇರಿ ಮೇ 8 : ಇಡೀ ವಿಶ್ವವನ್ನೇ ಕೊರೋನಾ ಸೋಂಕು ಕಾಡುತ್ತಿದ್ದು, ಕೊಡಗು ಕೊರೋನಾ ಮುಕ್ತ ಜಿಲ್ಲೆಯಾಗಿ ಉಳಿಯಲು ಎಲ್ಲರು ನೀಡಿದ ಸಹಕಾರವೇ ಕಾರಣವೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಕುಶಾಲನಗರದಲ್ಲಿ ಆಟೋಚಾಲಕರಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು. ಕೊರೋನಾ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಇದರಿಂದ ಎಲ್ಲಾ ಕ್ಷೇತ್ರದ ಜನರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ದಾನಿಗಳ ಸಹಕಾರದಿಂದ ಸುಮಾರು 60 ಸಾವಿರ ರೂ.ವೆಚ್ಚದಲ್ಲಿ ಆಟೋಚಾಲಕರಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.