ಕಾರ್ಮಿಕರು ಕೊಡಗಿನಿಂದ ಸ್ವಂತ ಊರಿಗೆ ಪ್ರಯಾಣ

May 8, 2020

ಮಡಿಕೇರಿ ಮೇ 8 : ತಾಲೂಕಿನಿಂದ 25 ವಲಸೆ ಕಾರ್ಮಿಕರನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮೂಲಕ ಜಿಲ್ಲಾಡಳಿತದ ವತಿಯಿಂದ ಉಚಿತವಾಗಿ ಸ್ವಂತ ಊರುಗಳಿಗೆ (ಹುಣಸೂರು, ಕೊಳ್ಳೆಗಾಲ) ಕಳುಹಿಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.
ಕಕ್ಕಬೆಯಿಂದ 4, ಕೋಣಂಜಗೇರಿ 11, ಹೋಸ್ಕೆರಿ 2, ಮರಗೋಡು 3 ಮತ್ತು ಬೆಂಗೂರಿನಿಂದ 5 ಸೇರಿದಂತೆ ಒಟ್ಟು 25 ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ. ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಹ್ಯಾಂಡ್‍ವಾಶ್, ಸೋಪ್ ಮತ್ತು ಸ್ಯಾನಿಟೈಜರ್ ವಿತರಿಸಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿ ಅವರವರ ಊರುಗಳಿಗೆ ಕಳಿಸಿಕೊಡಲಾಯಿತು ಎಂದು ಅವರು ತಿಳಿಸಿದ್ದಾರೆ.
ಸೆಸ್ಕಾಂ ಕೆಲಸಗಾರರಿಗೆ ಮಾಸ್ಕ್, ಹ್ಯಾಂಡ್‍ವಾಶ್ ಮತ್ತು ಸ್ಯಾನಿಟೈಜರ್ ವಿತರಿಸಲಾಯಿತು. ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರಾದ ಮಧು, ಎಂಜಿನಿಯರ್ ಪ್ರಸನ್ನಕುಮಾರ್ ಇತರರು ಹಾಜರಿದ್ದರು.

error: Content is protected !!