ವಿಶ್ವ ರೆಡ್‍ಕ್ರಾಸ್ ದಿನ : ಮಾಸ್ಕ್, ಸ್ಯಾನಿಟೈಸರ್ ಐಟಿಡಿಪಿ ಇಲಾಖೆಗೆ ಹಸ್ತಾಂತರ

09/05/2020

ಮಡಿಕೇರಿ ಮೇ 8 : ಕೋವಿಡ್-19 ಹಿನ್ನೆಲೆಯಲ್ಲಿ ವಿಶ್ವ ರೆಡ್‍ಕ್ರಾಸ್ ದಿನದ ಪ್ರಯುಕ್ತ ರೆಡ್‍ಕ್ರಾಸ್ ಕೊಡಗು ಘಟಕ ವತಿಯಿಂದ ಪರಿಶಿಷ್ಟ ಪಂಗಡ ಗಿರಿಜನ ಹಾಡಿಯ ಜನರಿಗೆ 5 ಸಾವಿರ ಮಾಸ್ಕ್, 1 ಸಾವಿರ ಸ್ಯಾನಿಟೈಸರ್, 2 ಸಾವಿರ ಸೋಪ್ ಮತ್ತು 150 ಮಂದಿಗೆ ಬೆಡ್‍ಸೀಟ್ ಮತ್ತಿತರ ಅಗತ್ಯ ಪರಿಕರಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಶುಕ್ರವಾರ ಹಸ್ತಾಂತರಿಸಲಾಯಿತು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ, ರೆಡ್‍ಕ್ರಾಸ್ ಘಟಕದ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಅಗತ್ಯ ಪರಿಕರಗಳನ್ನು ಹಾಡಿಗಳಿಗೆ ತಲುಪಿಸಲಾಗುವುದು ಎಂದು ರೆಡ್‍ಕ್ರಾಸ್ ಜಿಲ್ಲಾ ಸಭಾಪತಿಗಳಾದ ಬಿ.ಕೆ.ರವೀಂದ್ರ ರೈ ತಿಳಿಸಿದರು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮಸನ್ವಯಾಧಿಕಾರಿ ಸಿ.ಶಿವಕುಮಾರ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ, ರೆಡ್‍ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ಧನಂಜಯ ಇತರರು ಹಾಜರಿದ್ದರು.