ಆನೆಕಾಡು ಸಮೀಪದಲ್ಲಿ ನಾಗರ ಹಾವು ಪತ್ತೆ

May 9, 2020

ಸುಂಟಿಕೊಪ್ಪ, ಮೇ.8: ಆನೆಕಾಡು ವಸತಿಗೃಹದ ಸನಿಹದಲ್ಲಿರುವ ಡಿಪೋಬಳಿಯಲ್ಲಿ ಬೃಹತ್ ಗಾತ್ರದ ನಾಗರ ಹಾವು ಪತ್ತೆಯಾಗಿದ್ದು 7ನೇ ಹೊಸಕೋಟೆಯ ಉರಗ ಪ್ರೇಮಿ ಶಾಜಿ ಅವರಿಗೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಶಾಜಿ ಐದುವರೆ ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿದು ನಂತರ ಅರಣ್ಯಕ್ಕೆ ಬಿಟ್ಟರು.