ಪರಿಸರ ಮಾಲಿನ್ಯ ರಹಿತ ಕೊಡಗು ಈಗ ಅತಿ ಸುಂದರ

09/05/2020

ಮಡಿಕೇರಿ ಮೇ 9 : ಕೊರೋನಾ ಲಾಕ್ ಡೌನ್ ನಿಂದ ಎಲ್ಲಾ ಕ್ಷೇತ್ರಕ್ಕೂ ಕಷ್ಟ, ನಷ್ಟ ಉಂಟಾಗಿದೆ. ಆದರೆ ಕೊಡಗಿನ ಪರಿಸರಕ್ಕೆ ಮಾತ್ರ ಹೆಚ್ಚು ಲಾಭವಾಗಿದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಕಾಣುತ್ತಿದ್ದ ಪಶ್ಚಿಮ ಘಟ್ಟಗಳ ಶ್ರೇಣಿಯ ಕೊಡಗು ಸಹಜವಾಗಿಯೇ ಪರಿಸರ ಮಾಲಿನ್ಯಕ್ಕೆ ತುತ್ತಾಗಿತ್ತು. ಆದರೆ ಕಳೆದ ಎರಡು ತಿಂಗಳು ಪ್ರವಾಸೋದ್ಯಮಕ್ಕೆ ವಿಶ್ರಾಂತಿ ದೊರೆತ್ತಿರುವುದರಿಂದ ಮಾಲಿನ್ಯ ರಹಿತ ಕೊಡಗು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ. ಮುಂಜಾನೆ ಮಂಜು ಹಾಲ್ನೊರೆಯಂತೆ ಕಂಗೊಳಿಸುತ್ತಿದೆ.