ಸೋಮವಾರಪೇಟೆಯಲ್ಲಿ ದೇವಾಲಯಗಳ ಅರ್ಚಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

09/05/2020

ಮಡಿಕೇರಿ ಮೇ 9 : ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಷ್ಟದಲ್ಲಿರುವ ಸೋಮವಾರಪೇಟೆ ಪಟ್ಟಣದ ಸುತ್ತಮುತ್ತಲಿನ ದೇವಾಲಯಗಳ ಅರ್ಚಕರಿಗೆ ಬಸಪ್ಪ ಹಾರ್ಡ್‍ವೇರ್ಸ್‍ನ ಮಾಲೀಕರಾದ ಎಚ್.ಬಿ.ಹೃಷಿಕೇಶ್ ಅವರು ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಹೃಷಿಕೇಶ್ ಕುಟುಂಬಸ್ಥರು ದಿನಸಿ ಹಂಚಿಕೆ ಮಾಡಿದರು. ಈ ಸಂದರ್ಭ ಮಾತನಾಡಿದ ಶಾಸಕರು ಕೊರೋನಾ ವೈರಸ್ ವಿರುದ್ಧ ಮುನ್ನೆಚ್ಚರಿಕೆ ಅಗತ್ಯವೆಂದರು.