ಕೊರೊನಾ ವೈರಸ್ ಬಗ್ಗೆ ಜಾಗರೂಕರಾಗಿರಲು ಶಾಸಕ ಅಪ್ಪಚ್ಚುರಂಜನ್ ಮನವಿ
09/05/2020

ಮಡಿಕೇರಿ ಮೇ 9 : ಕೊರೊನಾ ವೈರಸ್ ಬಗ್ಗೆ ಕೊಡಗಿನ ಜನತೆ ಹೆಚ್ಚು ಜಾಗರೂಕರಾಗಿರಬೇಕು. ಜಿಲ್ಲಾಡಳಿತದ ಮೂಲಕ ಹಲವಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನತೆ ಸಹಕಾರ ನೀಡಬೇಕು ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮನವಿ ಮಾಡಿದ್ದಾರೆ.
ಸೋಮವಾರಪೇಟೆ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪರೀಕ್ಷೆಗಾಗಿ ಗಂಟಲು ದ್ರವ ತೆಗೆಯುವ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಸಾದ್ ಉಪಸ್ಥಿತರಿದ್ದರು.