ಕಾವೇರಿ ನದಿಯನ್ನು ಕಲುಷಿತಗೊಳಿಸದಂತೆ ಮಠಾಧೀಶರ ಮನವಿ

09/05/2020

ಮಡಿಕೇರಿ ಮೇ 9 : ಕಳೆದ ಒಂದೂವರೆ ತಿಂಗಳಿನಿಂದ ಜಾರಿಯಲ್ಲಿರುವ ಕೊರೋನಾ ಲಾಕ್ ಡೌನ್ ನಿಂದ ಕೊಡಗಿನ ಜೀವನದಿ‌ ಕಾವೇರಿ ಪರಿಶುದ್ಧ ಭಾವದೊಂದಿಗೆ ಹರಿಯುತ್ತಿದ್ದು, ಮಾಲಿನ್ಯ ಮುಕ್ತವಾಗಿದೆ.
ಕುಶಾಲನಗರದ ಮೂಲಕ ಹರಿಯುವ ಕಾವೇರಿ ನದಿಯ ಪರಿಶುದ್ಧತೆಯನ್ನು ಕಂಡು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶರು ಭಕ್ತಿಭಾವವನ್ನು ಮೆರೆದರು. ಪ್ರತಿಯೊಬ್ಬರೂ ನದಿ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದ ಅವರು ಪವಿತ್ರ ಕಾವೇರಿ ನದಿಯನ್ನು ಕಲುಷಿತಗೊಳಿಸದಂತೆ ಮನವಿ ಮಾಡಿದರು.