ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಬ್ರೆಜಿಲ್ ಪ್ರಜೆ ದಾಖಲು

09/05/2020

ಮಡಿಕೇರಿ ಮೇ 9 : ದಿಢೀರ್ ಎಂದು ಮಡಿಕೇರಿ ತಾಲ್ಲೂಕಿನ ಒಣಚಲು ಗ್ರಾಮದಲ್ಲಿ ಕಾಣಿಸಿಕೊಂಡ ಬ್ರೆಜಿಲ್ ಪ್ರಜೆಯೊಬ್ಬನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಒಣಚಲು ಬಸ್ ನಿಲ್ದಾಣದಲ್ಲಿ ವಿದೇಶದ ಪ್ರಜೆಯೊಬ್ಬ ಕುಳಿತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯನ್ನು ವಶಕ್ಕೆ ಪಡೆದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕರೆ ತಂದರು. ಹೆಚ್ಚಿನ ಚಿಕಿತ್ಸೆಗಾಗಿ ವಾರ್ಡಿಗೆ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯು ತಾನು ಬ್ರೆಜಿಲ್ ದೇಶದವನಾಗಿದ್ದು, ವರ್ಷದ ಹಿಂದೆಯೇ ಭಾರತಕ್ಕೆ ಬಂದಿದ್ದೇನೆ. ಸದ್ಯ ಮೈಸೂರು ಜಿಲ್ಲೆಯ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್ ನಿಂದ ಬಂದಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಆದರೆ ಈ ವ್ಯಕ್ತಿಯು ಮೈಸೂರು ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಬಂದಿರುವ ಬಗ್ಗೆ ಸಂಶಯ ಮೂಡಿದೆ.