ಕೊಡವ ಜನಾಂಗದ ಬಗ್ಗೆ ಅವಹೇಳನ ಸಂದೇಶ ರವಾನಿಸಿದ ಯುವಕ ನ್ಯಾಯಾಂಗ ಬಂಧನಕ್ಕೆ

09/05/2020

ಮಡಿಕೇರಿ ಮೇ 9 : ಇತ್ತೀಚೆಗೆ ಹೊಸ್ಕೇರಿ ಗ್ರಾಮದ ಯುವಕ ಸುಖೇಶ್ ಕೆ ಬಿ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಕೊಡವ ಜನಾಂಗದ ಬಗ್ಗೆ ಅವಹೇಳನಕಾರಿ ವಾಕ್ಯ ಸಂದೇಶ ರವಾನಿಸಿದ್ದು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ,ಕೊಡವ ಸಮಾಜ ಸೇರಿದಂತೆ ಹಲವು ಸಂಘಟನೆಗಳು ಈ ಕೃತ್ಯವನ್ನು ಖಂಡಿಸಿ ದೂರು ಸಲ್ಲಿಸಿದ್ದರು ,ಪೋಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಸದರಿ ಯುವಕನಿಂದ ತಪ್ಪೊಪ್ಪಿಗೆ ಹೇಳಿಕ ಬರೆಸಿಕೊಂಡು ಮುಕ್ತಾಯ ಮಾಡಿದ್ದರು ,ನಂತರ ಸಾಮಾಜಿಕ ಜಾಲತಾಣದಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇರುವ ಯುವಕರ ತಂಡ ತೆನ್ನೀರಾ ಮೈನಾ ನೇತೃತ್ವದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ ಮೇರೆಗೆ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಮಡಿಕೇರಿ ಗ್ರಾಮಾಂತರ  ಠಾಣೆಯ ಅಧಿಕಾರಿಗಳು ತೆನ್ನೀರಾ ಮೈನಾರವರಿಂದ ದೂರು ಪಡೆದು ಎಫ್ ಐ ಆರ್ ದಾಖಲಿಸಿ ಆರೋಪಿಯನ್ನು ಐ ಪಿ ಸಿ ಸೆಕ್ಷನ್ 153/A ಅನ್ವಯ ಬಂಧಿಸಿ ಮಡಿಕೇರಿಯ JMFC ನ್ಯಾಯಾಲಯಕ್ಕೆ ,,ಶುಕ್ರವಾರ ಹಾಜರುಪಡಿಸಿದರು ,ನ್ಯಾಯಾಧೀಶರು ಆರೊಪಿ ಸುಖೇಶ್ ಹೊಸ್ಕೇರಿ ಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ ,ಕೇಸು ದಾಖಲಿಸುವ ನಿಟ್ಟಿನಲ್ಲಿ ಪುತ್ತೇರಿರ ತಿಮ್ಮಯ್ಯ ,ಕೊಕ್ಕಲೆರ ಶ್ಯಾಮ್ ,ಬೊಳ್ಳಜ್ಜಿರ ಅಯ್ಯಪ್ಪ ,ಓಡಿಯಂಡ ನವೀನ್,ಶಾಂತೆಯಂಡ ನಿರನ್ ,ಪಾಲೆಂಗಡ ಅಮಿತ್ ,ಅಚ್ಚಾಂಡಿರ ಕುಶಾಲಪ್ಪ ,ಮೂಡೆರ ರಾಯ್ ,ಮಲ್ಲೇಂಗಡ ಸೋಮಣ್ಣ ,ಕೊಟ್ಟಕೇರಿಯನ ಅಜಿತ್ ಸೇರಿದಂತೆ ಜಿಲ್ಲೆಯಾದ್ಯಂತ ಯುವಕರು ನಿರಂತರ ಹೋರಾಟ ಮಾಡಿದ್ದರು ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ ಸುಮನ್ ಡಿ ಪನ್ನೇಕರ್ ರವರ ಜಿಲ್ಲೆಯ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ದಿಟ್ಟ ನಿರ್ಧಾರಕ್ಕೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ