ಆರ್‍ಎಸ್‍ಎಸ್ ಒಂದು ಜಾತಿಗೆ ಸೀಮಿತವಲ್ಲ

11/05/2020

ನವದೆಹಲಿ ಮೇ 10 : ಆರ್‍ಎಸ್‍ಎಸ್ ಮತ್ತು ಅದರ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಕೇವಲ ಒಂದು ಜಾತಿ ಅಥವಾ ನಂಬಿಕೆಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿರುವ ಪ್ರಖ್ಯಾತ ಮುಸ್ಲಿಂ ವಿದ್ವಾಂಸ ಮತ್ತು ಎನ್ ಸಿಪಿಯುಎಲ್ ನಿರ್ದೇಶಕ ಶೇಖ್ ಅಖೀಲ್ ಅಹ್ಮದ್, ಮುಸ್ಲಿಮರು ಸೇರಿದಂತೆ ದೇಶದ ಎಲ್ಲಾ ವರ್ಗಗಳು ಮತ್ತು ಧರ್ಮಗಳು ಸಮಾನವೆಂದು ಆರ್‍ಎಸ್‍ಎಸ್‍ಪರಿಗಣಿಸುತ್ತದೆ. ಮಾತ್ರವಲ್ಲ ಈ ಎಲ್ಲಾ ವರ್ಗಗಳು ಹಿಂದೂ ನಾಗರಿಕತೆಯ ಪಾಲುದಾರರು ಮತ್ತು ಸಾಮಾಜಿಕ ಐಕ್ಯತೆಯಿಂದ ಮಾತ್ರ ಭಾರತ ಸಮೃದ್ಧ ಮತ್ತು ಔನ್ನತ್ಯಕ್ಕೆ ಏರಬಹುದು ಎಂಬ ದೃಷ್ಟಿಯನ್ನು ಆರ್‍ಎಸ್‍ಎಸ್‍ಹೊಂದಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಒಂದು ತಿಂಗಳ ಲಾಕ್ ಡೌನ್ ನಂತರ, ಏಪ್ರಿಲ್ 26 ರಂದು ಆರ್‍ಎಸ್‍ಎಸ್‍ಸರಸಂಘಚಾಲಕ ಡಾ. ಭಾಗವತ್ ಅವರ ಭಾಷಣವನ್ನು ವಿಶ್ಲೇಷಿಸುತ್ತಾ ಡಾ.ಅಹ್ಮದ್ ಈ ಹೇಳಿಕೆ ನೀಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಾ.ಮೋಹನ್ ಭಾಗವತ್, ಆರ್‍ಎಸ್‍ಎಸ್‍ಒಂದು ಸಮಾಜ ಸೇವಾ ಸಂಸ್ಥೆಯಾಗಿದ್ದು, ಸಂಘವು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುತ್ವದ ಮೇಲೆ ನಂಬಿಕೆ ಇಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.