ಪ್ಯಾಕೇಜ್ ಘೋಷಣೆಯಷ್ಟೆ : ಹೆಚ್‍ಡಿಕೆ ಟೀಕೆ

11/05/2020

ಬೆಂಗಳೂರು ಮೇ 10 : ಕೊರೋನಾಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ 1610 ಕೋಟಿ ರೂ. ಪ್ಯಾಕೇಜ್ ಸಹ ನೆರೆ ಪರಿಹಾರದ ಪ್ಯಾಕೇಜ್ ನಂತೆ ಬರೀ ಘೋಷಣೆಯಂತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಲವು ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದೆಯಾದರೂ ಆ ವರ್ಗದ ಜನರನ್ನು ಗುರುತಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಅಸಂಘಟಿತ ಕಾರ್ಮಿಕ ವರ್ಗದವರಿಗೆ ಹೇಗೆ ಪರಿಹಾರ ತಲುಪಿಸುತ್ತೀರಿ? ಎಂದು ಪ್ರಶ್ನಿಸಿದರು.