ಭಾರತೀಯರನ್ನು ಕರೆ ತಂದ ನೌಕೆ
11/05/2020

ಕೊಚ್ಚಿ ಮೇ 10 : ಮಾಲ್ಡೀವ್ಸ್ ನಲ್ಲಿ ನಿರಾಶ್ರಿತರಾಗಿದ್ದ 698 ಮಂದಿ ಭಾರತೀಯರನ್ನು ಭಾರತೀಯ ನೌಕಾದಳದ ಯುದ್ಧ ನೌಕೆ “ಐಎನ್ಎಸ್ ಜಲಾಶ್ವ” ಯಶಸ್ವಿಯಾಗಿ ಕರೆತಂದಿದ್ದು, ಇಂದು ಕೊಚ್ಚಿ ಬಂದರಿಗೆ ಬಂದು ಲಂಗರು ಹಾಕಿದೆ.
ಮಾಲ್ಡೀವ್ಸ್ನಿಂದ ಹೊರಟ ಐಎನ್ಎಸ್ಜಲಾಶ್ವ ಭಾನುವಾರ ಬೆಳಗ್ಗೆ ಕೇರಳದ ಕೊಚ್ಚಿ ಬಂದರನ್ನು ತಲುಪಿದ್ದು, ಬರೋಬ್ಬರಿ 698 ಪ್ರಜೆಗಳು ತಾಯ್ನಾಡಿಗೆ ಮರಳಿದ್ದಾರೆ. ಇದರಲ್ಲಿ 400 ಮಂದಿ ಕೇರಳದವರಾಗಿದ್ದು, ಉಳಿದ 200 ಮಂದಿ ದೇಶದ ಇತರ ಭಾಗಕ್ಕೆ ಸೇರಿದವರಾಗಿದ್ದಾರೆ. ಈ 200 ಮಂದಿಯ ಪೈಕಿ 4 ಮಂದಿ ಲಕ್ಷ ದ್ವೀಪದವರಾಗಿದ್ದು, 187 ಮಂದಿ ತಮಿಳುನಾಡು ಮೂಲದವರಾಗಿದ್ದಾರೆ. ತೆಲಂಗಾಣದ 9, ಆಂಧ್ರ ಪ್ರದೇಶದ 8, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ 3 ಮಂದಿ, ಗೋವಾ ಮತ್ತು ಅಸ್ಸಾಂನ ತಲಾ ಒಬ್ಬರು ತಾಯ್ನಾಡಿಗೆ ಮರಳಿದ್ದಾರೆ.
ಇನ್ನು ಕೇರಳ ತನ್ನ ನಾಡಿನ ವಿದೇಶಿ ಸಂತ್ರಸ್ತರನ್ನು ಆಯಾ ಜಿಲ್ಲೆಗಳಿಗೆ ತಲುಪಿಸಲು, ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಿಕೊಂಡಿದೆ.