ಹಸಿರ ಶಿವಮೊಗ್ಗದಲ್ಲಿ 8 ಪ್ರಕರಣ ಪತ್ತೆ

11/05/2020

ಶಿವಮೊಗ್ಗ ಮೇ 10 : ಕರ್ನಾಟಕಕ್ಕೆ ಕೊರೋನಾ ಮಹಾಮಾರಿ ದಾಂಗುಂಡಿ ಇಟ್ಟಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಪ್ರಕರಣ ಪತ್ತೆಯಾಗದ ಶಿವಮೊಗ್ಗದಲ್ಲಿ  8 ಪ್ರಕರಣಗಳು ಪತ್ತೆಯಾಗಿವೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸೋಂಕು ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ.
21 ತಬ್ಲಿಘಿಗಳು ಸೇರಿ 136 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗ ಜಿಲ್ಲೆಯ ಹೊಳಲ್ಕೆರೆ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ನಿನ್ನೆ 9 ಮಂದಿ ಗುಜರಾತ್ ನ ಅಹಮದಾಬಾದ್ ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ಪೈಕಿ 8 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಇವರೆಲ್ಲಾ ಸಿಎಂ ಬಿಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದವರೇ ಆಗಿದ್ದಾರೆ.
ಸದ್ಯ 8 ಮಂದಿ ಕೊರೋನಾ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.