ಚಾಲಕನ ನಿಯಂತ್ರಣ ತಪ್ಪಿ ಪ್ಯಾನ್ಸಿ ಅಂಗಡಿಗೆ ನುಗ್ಗಿದ ಕಾರು

11/05/2020

ಸುಂಟಿಕೊಪ್ಪ,ಮೇ.11 : ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಓಮ್ನಿವ್ಯಾನ್ ಮೈಗಲ್ಲಿಗೆ ಡಿಕ್ಕಿಗೊಂಡು ಪ್ಯಾನ್ಸಿ ಅಂಗಡಿಗೆ ನುಗ್ಗಿದ ಘಟನೆಯೊಂದು ವರದಯಾಗಿದೆ.
ಮಡಿಕೇರಿ ಕಡೆಯಿಂದ ಆಗಮಿಸಿ ಕನ್ನಡ ವೃತ್ತದ ಮೂಲಕ ಮಾದಾಪುರ ರಸ್ತೆ ಕಡೆಗೆ ಚಲಿಸುತ್ತಿದ್ದ ಮಾರುತಿ ಓಮ್ನಿ (ಕೆಎ12 0055)ವ್ಯಾನ್ ಚಾಲಕ ನಿಯಂತ್ರಣ ತಪ್ಪಿದ್ದು ರಾಜ್ಯ ಹೆದ್ದಾರಿ ಬದಿಯ ಮೈಲಿಗಲಿಗೆ ಡಿಕ್ಕಿ ಹೊಡೆದಿದ್ದು ವಾಹನವು ನಿಯಂತ್ರಣಕ್ಕೆ ಬಾರದೆ ಪ್ಯಾನ್ಸಿ ಅಂಗಡಿಗೆ ಮುಂಭಾಗದಲ್ಲಿ ನಿಂತಿದ್ದ 2 ದ್ವಿಚಕ್ರ ವಾಹನಗಳಿಗೂ ಡಿಕ್ಕಿಗೊಂಡು ಪ್ಯಾನ್ಸಿ ಅಂಗಡಿಯ ಮೆಟ್ಟಿಲುಮೇಲೆ ನಿಂತಿತು. ಅದೃಷ್ಟವಶತ್ ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಮುಂಭಾಗದಲ್ಲಿ ಯಾರು ಇಲ್ಲದಿದ್ದು ಪ್ರಾಣ ಹಾನಿ ಸಂಭವಿಸಿಲ್ಲ. ದ್ವಿಚಕ್ರ ವಾಹನಗಳು ಮಾತ್ರ ಸಣ್ಣ ಪ್ರಮಾಣದಲ್ಲಿ ಜಖಂಗೊಂಡಿತು.