ರೋಟರಿ ರೀ ಬಿಲ್ಡ್ ಕೊಡಗು ಯೋಜನೆ ಮೂಲಕ ಮಳೆಹಾನಿ ಸಂತ್ರಸ್ತರಿಗೆ 25 ಮನೆಗಳ ಹಸ್ತಾಂತರ

May 11, 2020

ಮಡಿಕೇರಿ ಮೇ 11 : ಕೊಡಗಿನಲ್ಲಿ ಪ್ರಾಕೃತ್ತಿಕ ವಿಕೋಪದಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ರೀ ಬಿಲ್ಡ್ ಕೊಡಗು ಯೋಜನೆ ಮೂಲಕ ಮತ್ತೆ 25 ಮನೆಗಳನ್ನು ಹಸ್ತಾಂತರ ಮಾಡಲಾಗಿದ್ದು, ಈ ವರೆಗೂ ರೋಟರಿಯಿಂದ 50 ಮನೆಗಳನ್ನು ಸಂತ್ರಸ್ಥರಿಗೆ ನೀಡಲಾಗಿದೆ.

ಕಳೆದ ವರ್ಷ ಜೂನ್ ನಲ್ಲಿ ಪ್ರಥಮ ಹಂತವಾಗಿ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಮಾದಾಪುರ ಬಳಿಯ ಇಗ್ಗೋಡ್ಲುಗ್ರಾಮದಲ್ಲಿ 25 ಮನೆಗಳನ್ನು ರೀ ಬಿಲ್ಡ್ ಕೊಡಗು ವತಿಯಿಂದ ನೀಡಲಾಗಿತ್ತು.

ಇದೀಗ ಮಾದಾಪುರ, ಗರಗಂದೂರು ವ್ಯಾಪ್ತಿಯ 25 ಮಂದಿಗೆ ಅವರ ಜಾಗದಲ್ಲಿಯೇ ಹೊಸ ಮನೆ ನಿರ್ಮಾಣ ಮಾಡಿ ಭಾನುವಾರ ಸರಳ ರೀತಿಯಲ್ಲಿ ಹಸ್ತಾಂತರಿಸಲಾಯಿತು ಎಂದು ರೀ ಬಿಲ್ಡ್‍ಯೋಜನಾ ಸಮಿತಿ ಅಧ್ಯಕ್ಷಡಾ .ರವಿ ಅಪ್ಪಾಜಿ ತಿಳಿಸಿದ್ದಾರೆ.

ಈವರೆಗೂ ವಿವಿಧರೋಟರಿಕ್ಲಬ್ ಗಳು ನೀಡಿದ ಸಹಾಯಧನ ಬಳಸಿ 2.56 ಕೋಟಿರು. ವೆಚ್ಚದಲ್ಲಿ ಮನೆಗಳನ್ನು ರೋಟರಿ ಮೂಲಕ ಹ್ಯಾಬಿಟೇಟ್ ಫಾ?ರ್ ಹ್ಯೂಮಾನಿಟಿ ಇಂಡಿಯಾ ಸಂಸ್ಥೆಯು ನಿರ್ಮಾಣ ಮಾಡಿದೆ. ಪ್ರತೀ ಮನೆಗೂ 5.5 ಲಕ್ಷರು ವೆಚ್ಚತಗುಲಿದೆ. ಅಂತರರಾಷ್ಟ್ಪೀಯ ರೋಟರಿ ಸಂಸ್ಥೆಯ ಪ್ರಮುಖರು ಹಾಗೂ ಭಾರತದ ರೋಟರಿ ನಾಯಕರ ಬೆಂಬಲದೊಂದಿಗೆ ಈ ಯೋಜನೆ ಕಾರ್ಯಗತಗೊಂಡಿದೆ ಎಂದು ಡಾ.. ರವಿ ಅಪ್ಪಾಜಿ ಮಾಹಿತಿ ನೀಡಿದ್ಗಾರೆ.
ಲಾಕ್‍ಡೌನ್ ನಿಯಮಗಳಂತೆ ಸಭಾ ಕಾರ್ಯಕ್ರಮ ಇಲ್ಲದೇ ಸರಳ ರೀತಿಯಲ್ಲಿ 25 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು..
ಕಾರ್ಯಕ್ರಮದಲ್ಲಿ ರೋಟರಿ ಪುನರ್ನಿರ್ಮಾಣ ಕೊಡಗು ಟ್ರಸ್ಟ್ ಅಧ್ಯಕ್ಷ ಪಿ. ರೋಹಿತ್‍ನಾಥ್, ಖಜಾಂಚಿ ಪಿಡಿಜಿ ಕೃಷ್ಣ ಶೆಟ್ಟಿ, ಡಿ.ಜಿ. ಮ್ಯಾಥ್ಯೂ ಜೋಸೆಫ್, ಡಿಜಿಜಿ ರಂಗನಾಥ ಭಟ್, ಹ್ಯಾಬಿಟ್ಯಾಬ್ ಫಾರ್ ಹ್ಯುಮಾನಿಟಿ ಇಂಡಿಯಾದ ಶ್ವೇತಾ, ಅಭಿವೃದ್ಧಿ ಸಂಸ್ಥೆಯ ನರಸಿಂಹ ಮೂರ್ತಿ, ಯೋಜನೆಯ ಮೇಲ್ವಿಚಾರಕಾರದ ಹರೀಶ್, ಉಮೇಶ್ ಗೌಡ, ಹಾಗೂ ಹರದೂರು ಗ್ರಾ. ಪಂ. ಅಧ್ಯಕ್ಷ ಸುಮ , ಸದಸ್ಯ ದೇವಪ್ಪ ಹಾಜರಿದ್ದರು.

error: Content is protected !!