ಮಾಸ್ಕ್ ತಯಾರಿಕೆಯಲ್ಲಿ ವಿಶೇಷ ಚೇತನರು

11/05/2020

ಮಡಿಕೇರಿ ಮೇ 11 : ಸುಂಟಿಕೊಪ್ಪ ಸಮೀಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ವಿಶೇಷ ಚೇತನರ ತಂಡವು ಕಳೆದ ಒಂದು ತಿಂಗಳಿನಿಂದ ಸ್ವಸ್ಥ ಕೇಂದ್ರದಲ್ಲಿ ಬೃಹತ್ ಸಂಖ್ಯೆಯಲ್ಲಿ ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ಟಾಟಾ ಕಾಫೀ ಲಿಮಿಟೆಡ್ ಮತ್ತು ಟಾಟಾ ಸಂಸ್ಥೆ ನೌಕರರಿಗೆ ಬಳಸಲು ಆರಂಭಗೊಂಡ ಮಾಸ್ಕ್ ತಯಾರಿಕೆಯ ಮೇರೆಗೆ ಸಾರ್ವಜನಿಕರಿಗೆ, ಇಲಾಖೆಗಳಿಗೆ ಮತ್ತು ಸಂಘ ಸಂಸ್ಥೆಗಳಿಗೂ ಮಾಸ್ಕ್ ಒದಗಿಸುತ್ತಾ ಬಂದಿದೆ.