ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಫೋನ್‍ಇನ್ ಕಾರ್ಯಕ್ರಮ

12/05/2020

ಮಡಿಕೇರಿ ಮೇ.11 : ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯಕ್ಕೆ ಸಂಬಂದಿಸಿದಂತೆ ನೇರ ಫೋನ್‍ಇನ್ ಕಾರ್ಯಕ್ರಮವು ಶನಿವಾರ ನಡೆಯಿತು. ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಮೂಡಿಬಂತು. ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ದೂರವಾಣಿ ಕರೆಮಾಡಿ ತಮ್ಮಲ್ಲಿರುವ ಗೊಂದಲಗಳು ಮತ್ತು ಸಮಸ್ಯೆಗಳಿಗೆ ಉತ್ತರ ಪಡೆದುಕೊಂಡರು.
ಆರನೇ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಹಿಂದಿ ವಿಷಯದಲ್ಲಿನ ಸಮಸ್ಯೆಗಳಿಗೆ ವಿದ್ಯಾರ್ಥಿಗಳಾದ ಗಾಯನ, ಕೃತಿಕ, ವಿನೋದ್, ಪ್ರತಿಭಾ, ಸುಹೈಲ್, ಅಗ್ನೇಶ್, ಲತಾ, ಅವಿನ್, ಜನನಿ, ಜೀವಿತ್, ಜೀವಾ, ಜಸೀಲ, ಗ್ರೀಷ್ಮ ಕವನ, ಫಿಜಾ, ಸಂಧ್ಯಾ ಮತ್ತು ಪ್ರಜಾÐ ಇವರುಗಳು ಪ್ರಶ್ನೆಗಳನ್ನು ಕೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಂತ ಮೈಕಲರ ಪ್ರೌಢಶಾಲೆ ಮಡಿಕೇರಿಯ ಸಹಶಿಕ್ಷಕರಾದ ಸವರಿನ್ ಡಿಸೋಜ ಹಾಗೂ ಸರ್ಕಾರಿ ಪ್ರೌಢಶಾಲೆ ಚೆಂಬುವಿನ ಸಹಶಿಕ್ಷಕರಾದ ಕಾಮಾಕ್ಷಿ ಇವರುಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸಿದರು. ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿನ ವ್ಯಾಕರಣಾಂಶಗಳಾದ ಕಾರಕ, ದ್ವಿರುಕ್ತಿ, ಲಿಂಗ ,ಸಂಧಿ, ಸಮಾಸ ದೋಹೆ ಪತ್ರ ಲೇಖನ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಮೇ 9 ರಿಂದ ಡಿ.ಡಿ ಚಂದನ ವಾಹಿನಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಪುನರ್ ಮನನ ತರಗತಿಗಳು ಪ್ರಸಾರವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ಅವರು ಕೋರಿದ್ದಾರೆ.