ಸೇವಾಸಿಂಧು ಇ ಪಾಸ್ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡಲು ಮನವಿ

12/05/2020

ಮಡಿಕೇರಿ ಮೇ.11 : ಕೊಡಗು ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ರಾಜ್ಯಕ್ಕೆ ಹಿಂತಿರುಗಲು ಬಯಸುವ ವಲಸೆ ಕಾರ್ಮಿಕರ ಗಮನಕ್ಕಾಗಿ, ಕಾರ್ಮಿಕರ ಬಳಿ ಸೇವಾಸಿಂದು ಇ ಪಾಸ್ ಇಲ್ಲದಿದ್ದರೆ, ಅದನ್ನು ಸೇವಾಸಿಂಧು ಪೆÇೀರ್ಟಲ್ ಮೂಲಕ ಪಡೆದು ಹತ್ತಿರದ ಪಂಚಾಯಿತಿಗಳಿಗೆ ವರದಿ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ಕಾರ್ಮಿಕರು ತಮ್ಮ ಸೇವಾಸಿಂಧು ಪಾಸ್ ಪಡೆದ ನಂತರ, ನಿಮ್ಮ ಹೆಸರುಗಳನ್ನು ಪಂಚಾಯತ್‍ನಲ್ಲಿ ನೋಂದಾಯಿಸಿ ಅಥವಾ 1077 ಗೆ ಕರೆ ಮಾಡಿ.
ಈ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ಒಂದೇ ಸ್ಥಳಕ್ಕೆ ಹೋಗುವ ಕನಿಷ್ಠ 25 ಜನರು ಇದ್ದಲ್ಲಿ ಮಾತ್ರ ಜಿಲ್ಲಾಡಳಿತದಿಂದ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ವ್ಯವಸ್ಥೆಗೊಳಿಸಲಾಗುವುದು. ಒಂದು ಬಾರಿಗೆ ಒಂದು ಬಸ್ಸಿನಲ್ಲಿ ಕೇವಲ 25 ರಿಂದ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ಕೆಎಸ್‍ಆರ್‍ಟಿಸಿ ಬಸ್ ದರ ಪ್ರತಿ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ ಅಂದಾಜು 1.60 ರೂ. ಆಗಿರುತ್ತದೆ. ಇದರೊಂದಿಗೆ ಕೆಎಸ್‍ಆರ್‍ಟಿಸಿ ಸಾರಿಗೆ ಸಂಸ್ಥೆಯ ಇತರೆ ನಿಯಮಗಳು ಅನ್ವಯಿಸುತ್ತದೆ.
ಕಾರ್ಮಿಕರಿಗೆ ಮುಖಗವಸು ಮತ್ತು ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಒದಗಿಸಲು ಮತ್ತು ವೈದ್ಯಕೀಯ ತಪಾಸಣೆಗಾಗಿ ಆರೋಗ್ಯ ಇಲಾಖೆಗೆ ಅನುಕೂಲವಾಗುವಂತೆ ಕಾರ್ಮಿಕ ಇಲಾಖೆಗೆ ನಿರ್ದೇಶಿಸಲಾಗಿದೆ.
ತಾಲ್ಲೂಕು ಪಂಚಾಯಿತಿ ಇಒ ಮತ್ತು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಉಪ ವಿಭಾಗಾಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು. ಮತ್ತು ಉಪ ವಿಭಾಗಾಧಿಕಾರಿಗಳು ಕೆಎಸ್‍ಆರ್‍ಟಿಸಿ ಡಿಪೆÇೀ ವ್ಯವಸ್ಥಾಪಕರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ಮುಂತಾದ ರಾಜ್ಯಗಳಿಗೆ ಮರಳಲು ಬಯಸುವ ವಲಸೆ ಕಾರ್ಮಿಕರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಇತರೆ ರಾಜ್ಯಗಳ ವಲಸೆ ಕಾರ್ಮಿಕರಿಗೆ ಸ್ವ-ಸ್ಥಳಕ್ಕೆ ಹಿಂತಿರುಗುವ ಸಂಬಂಧ ಈ ರಾಜ್ಯಗಳೊಂದಿಗೆ ಚಿರ್ಚಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.