ಮಡಿಕೇರಿಯಲ್ಲಿ ತಡರಾತ್ರಿ ಕಾಣಿಸಿಕೊಂಡ ‘ಕಳ್ಳ’ ಕೈಗೆ ಸಿಕ್ಕದೆ ಪರಾರಿ.. ಇದು ಲಾಕ್’ಡೌನ್ ಎಫೆಕ್ಟಾ..?

12/05/2020

                                                                                                                           ವರದಿ;-ರಂಜಿತ್ ಕವಲಪಾರ

ಮಡಿಕೇರಿ : ಕಳ್ಳನೊಬ್ಬ ತಡರಾತ್ರಿ ಮನೆಯೊಂದಕ್ಕೆ ನುಗ್ಗುವ ಸಂದರ್ಭ ನೆರೆಮನೆಯವರ ಕಣ್ಣಿಗೆ ಬಿದ್ದು ಕಾಲ್ಕಿತ್ತಿರುವ ಘಟನೆಯು ನಗರದ ಟೀಜಾನ್ ಲೇಔಟ್’ನಲ್ಲಿ ನಡೆದಿದ್ದು. ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಮಡಿಕೇರಿಯ ಟೀಜಾನ್ ಲೇಔಟಿನ ಮನೆಯೊಂದಕ್ಕೆ ಮೊನ್ನೆದಿನ 10-02-2020ರ ಭಾನುವಾರ ತಡರಾತ್ರಿ ಸುಮಾರು 10-30ರ ಸಮಯಕ್ಕೆ ಕಳ್ಳನೊಬ್ಬ ಮನೆಯೊಂದಕ್ಕೆ ನುಗ್ಗಲು ಹೊಂಚುಹಾಕುತ್ತಿರುವುದನ್ನು ಗಮಿಸಿದ ಲೇಔಟಿನ ನಿವಾಸಿ ಮನ್ಸೂರ್ ಅಲಿ ಎನ್ನುವವರ ನಿವಾಸದಲ್ಲಿ ಬಾಡಿಗೆಗೆ ಇರುವ ಶೈಲಜ ಎಂಬ ಮಹಿಳೆಯು ಆತಂಕಗೊಂಡು. ತಕ್ಷಣ ಮನ್ಸೂರ್ ಅಲಿ ಅವರ ಮೊಬೈಲ್’ಗೆ ಕರೆಮಾಡಿ ಅವರಿಗೆ ಅನುಮಾನಾಸ್ಪದ ವ್ಯಕ್ತಿಯ ಕುರಿತು ಮಾಹಿತಿಯನ್ನು ನೀಡಿದ ಹಿನ್ನೆಲೆ. ಕೂಡಲೆ ಎಚ್ಚೆತ್ತುಕೊಂಡು ಮನೆಯ ಹೊರಗಿನ ಲೈಟ್ ಹಾಕಿ ಮನ್ಸೂರ್ ಅವರು ಹೊರಗೆ ಬಂದು ಗಮನಿಸಿದಾಗ. ಸುಮಾರು 5.6ಅಡಿ ಎತ್ತರ, ಕೆಂಪು ಬಣ್ಣದ ಟೀ ಶರ್ಟ್ ಹಾಗು ಟ್ರಾಕ್ ಪ್ಯಾಂಟ್ ಧರಿಸಿ, ಮಂಕಿಕ್ಯಾಪ್ ಹಾಕಿಕೊಂಡು ಸಂಪೂರ್ಣವಾಗಿ ಮುಖವನ್ನು ಮರೆಮಾಚಿದ್ದ ವ್ಯಕ್ತಿಯೊಬ್ಬ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣ ಜಾಗೃತರಾದ ಮನ್ಸೂರ್ ಅಲಿ ಅವರು ಯಾರು ನೀನು ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ ಹಿನ್ನೆಲೆ ತಕ್ಷಣ ಅನುಮಾನಸ್ಪದ ವ್ಯಕ್ತಿಯು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಒಂದಿಷ್ಟು ದೂರ ಓಡಿ ಅವನ ಬೆನ್ನತ್ತಿದ ಮನ್ಸೂರ್ ಅವರು ಕಾಲಿಗೆ ಚಪ್ಪಲಿ ಧರಿಸದಿದ್ದ ಕಾರಣ ಕಲ್ಲುರಸ್ತೆಯಲ್ಲಿ ವೇಗವಾಗಿ ಹೋಗಿ ಆತನನ್ನು ಹಿಡಿಯಲು ವಿಫಲರಾಗಿದ್ದಾರೆ.
ಕೂಡಲೇ ಮಡಿಕೇರಿಯ ನಗರ ಠಾಣೆಗೆ ಕರೆಮಾಡಿ ದೂರವಾಣಿ ಮೂಲಕ ಮನ್ಸೂರ್ ಅವರು ನಡೆದ ಘಟನೆಯ ಕುರಿತು ಮಾಹಿತಿ ನೀಡಿದ ಹಿನ್ನೆಲೆ. ಘಟನಾ ಸ್ಥಳಕ್ಕೆ ಎರಡು ನೈಟ್ ಬೀಟ್ ಪೆÇಲೀಸರು ಆಗಮಿಸಿ, ಘಟನೆಯ ಕುರಿತು ಹೇಳಿಕೆ ಪಡೆದು ಕಳ್ಳನಿಗಾಗಿ ಬಲೆಬೀಸಿದ್ದಾರೆ ಎಂದು ಹೇಳಲಾಗಿದೆ.
ಕೊರೋನಾ ಲಾಕ್’ಡೌನ್ ಹಿನ್ನೆಲೆ ದೇಶಕ್ಕೆ ದೇಶವೇ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಹಾಕಿಕೊಂಡಿರುವ ಈ ಸಂದರ್ಭ. ಕೆಲಸ ಕಾರ್ಯವಿಲ್ಲದ ಹಲವರು ಇಂತಹ ಪಾತಕ ಕೃತ್ಯಗಳಿಗೆ, ಕಳ್ಳತಕ್ಕೆ, ದರೋಡೆಗೆ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು.ಈ ಕುರಿತು ಈಗಾಗಲೇ ಪೆÇಲೀಸ್ ಇಲಾಖೆಯು ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಕೋರಿಕೊಂಡಿದೆ.

ಹೀಗಿದ್ದು ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿಕೊಂಡಲ್ಲಿ ಪೆÇಲೀಸ್ ಇಲಾಖೆಗೆ ಮಾಹಿತಿ ಕೊಡುವ ಹಾಗು ತಮ್ಮ ಎಚ್ಚರಿಕೆಯಲ್ಲಿ ತಾವು ಇರುವುದು ನಾಗರಿಕರಲ್ಲಿ ಅನಿವಾರ್ಯ ಹಾಗು ಸುರಕ್ಷಿತ. ಒಂದು ಕ್ಷಣದ ನಿರ್ಲಕ್ಷ್ಯವು ಪ್ರಾಣಕ್ಕೆ ಕುತ್ತಾಗುವ ಅಪಾಯ ಇರುತ್ತದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪ್ರತ್ಯೇಕ ತಂಡವನ್ನು ನಿರ್ಮಿಸಿ, ಕಳ್ಳನನ್ನು ಬಹುಬೇಗನೆ ಪತ್ತೆಹಚ್ಚಿ ಜನರಲ್ಲಿ ಮೂಡಿರುವ ಆತಂಕವನ್ನು ದೂರಮಾಡಬೇಕಿದೆ ಹಾಗು ರಾತ್ರಿವೇಳೆ ನಗರದಲ್ಲಿ ಪೆÇಲೀಸ್ ಬೀಟ್ ಅನ್ನು ಇನ್ನಷ್ಟು ಬಿಗಿಗೊಳಿಸುವ ಅನಿವಾರ್ಯತೆಯೂ ಇದೆ.