ವಸತಿ ಗೃಹಗಳಲ್ಲಿ ತಂಗುವವರು ಬಾಡಿಗೆ ಹಣ ಪಾವತಿಸಬೇಕು

12/05/2020

ಮಡಿಕೇರಿ ಮೇ 12 : ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಕೊಡಗಿಗೆ ಆಗಮಿಸುವವರು ಹಾಸ್ಟೆಲ್ ಅಥವಾ ವಸತಿ ಗೃಹಗಳಲ್ಲಿ ಕ್ವಾರಂಟೈನ್ ಗೆ ಒಳಪಡುವುದು ಕಡ್ಡಾಯವಾಗಿದ್ದು, ವಸತಿ ಗೃಹಗಳಲ್ಲಿ ತಂಗುವವರು ಬಾಡಿಗೆ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನಗರದ ವಿವಿಧ ಕ್ವಾರಂಟೈನ್ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದೆಂದು ಹೇಳಿದರು.