ಕೋವಿಡ್ ‘ಹೆಲ್ತ್ ವಾಚ್ ಆಪ್’ ಜಾರಿ : ಬಿಎಲ್‍ಒ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಗಾರ

12/05/2020

ಮಡಿಕೇರಿ ಮೇ.12 : ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ಕೋವಿಡ್ ‘ಹೆಲ್ತ್ ವಾಚ್ ಆಪ್’ ಜಾರಿಗೆ ತಂದಿದ್ದು. ಈ ಆಪ್ ಬಳಕೆಯ ಬಗ್ಗೆ ಬಿಎಲ್‍ಒ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಗಾರವು ಮಂಗಳವಾರ ನಡೆಯಿತು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಡಿಕೇರಿ ತಹಶೀಲ್ದಾರರಾದ ಮಹೇಶ್ ಅವರ ನೇತೃತ್ವದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಕೋವಿಡ್-19 ತಡೆ ಸಂಬಂಧ ರಾಜ್ಯ ಸರ್ಕಾರವು ಈ ಆಪ್‍ನ್ನು ಜಾರಿಗೆ ತಂದಿದ್ದು, ಸಂಬಂಧಪಟ್ಟ ಬಿಎಲ್‍ಒಗಳು ಮತ್ತು ಶಿಕ್ಷಕರು ಬೂತ್ ಮಟ್ಟದಲ್ಲಿ ಪ್ರತಿ ಮನೆಗಳಿಗೂ ತೆರಳಿ ಮನೆಯ ಸದಸ್ಯರ ಆರೋಗ್ಯದ ವಿವರಗಳನ್ನು ಮತ್ತು 60 ವರ್ಷ ಮೇಲ್ಪಟ್ಟ ಕುಟುಂಬ ಸದಸ್ಯರ ವಿವರಗಳನ್ನು ಈ ಅಪ್ಲಿಕೇಶನ್‍ನಲ್ಲಿ ನಮೂದಿಸಬೇಕಿದೆ ಎಂದರು.
ಭೂಮಿ ಕನ್ಸಲ್ಟೆಂಟ್ ನಿತಿನ್ ನಾಣಯ್ಯ ಅವರು, ಅಪ್ಲಿಕೇಶನ್‍ನನ್ನು ಡೌನ್‍ಲೋಡ್ ಮಾಡಿಕೊಳ್ಳುವ ಬಗೆ, ಮಾಹಿತಿ ನಮೂದು ಮಾಡುವ ಕುರಿತಾಗಿ ಮತ್ತು ಮನೆ ಮನೆಗೆ ತೆರಳಿ ಕಾರ್ಯನಿರ್ವಹಿಸುವ ಬಗ್ಗೆ ಬಿಎಲ್ ಒಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡಿದರು. ಬಿಆರ್‍ಸಿ ಪುಟ್ಟ ರಂಗನಾಥ್, ಶಿರಸ್ತೆದಾರರಾದ ಪ್ರವೀಣ್ ಕುಮಾರ್ ಮತ್ತು ಗುರುರಾಜ್, ಬಿಎಲ್‍ಒಗಳು, ಶಿಕ್ಷಕರು ಇತರರು ಇದ್ದರು.