ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಕಾರ್ಮಿಕರು ಅತಂತ್ರ

May 12, 2020

ಮಡಿಕೇರಿ ಮೇ 12 : ಕೊಡಗು ಜಿಲ್ಲೆಯಿಂದ ತಮಿಳುನಾಡಿಗೆ ತೆರಳಲು ಹೊರಟ 17 ಮಂದಿ ತೋಟ ಕಾರ್ಮಿಕರು ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಪ್ರಕರಣ ಗೋಚರಿಸಿದೆ. ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್ ಬಳಿಯ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 17 ಮಂದಿ ಕೆದಕಲ್‍ನಿಂದ ನಡೆದುಕೊಂಡು ಬಂದು ಕುಶಾಲನಗರ ಪೊಲೀಸ್ ತಪಾಸಣಾ ಕೇಂದ್ರ ದಾಟಿ ಮೈಸೂರು ಜಿಲ್ಲೆಯ ಕೊಪ್ಪ ತಪಾಸಣಾ ಕೇಂದ್ರಕ್ಕೆ ತಲುಪಿದ್ದಾರೆ. ಅಲ್ಲಿಂದ ಮುಂದೆ ತೆರಳಲು ಮೈಸೂರು ಜಿಲ್ಲಾ ಪೊಲೀಸರು ಅನುಮತಿ ಕಲ್ಪಿಸದ ಹಿನ್ನಲೆಯಲ್ಲಿ ಕೊಪ್ಪ ಕಾವೇರಿ ಸೇತುವೆ ಬಳಿ ಮರದಡಿ ಕುಳಿತು ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ.

error: Content is protected !!