ಗರ್ಭಿಣಿ ಸಾವಿನ ಪ್ರಕರಣ : ಕೊಲೆ ಶಂಕೆ ವ್ಯಕ್ತಪಡಿಸಿದ ತಾಯಿ

May 12, 2020

ಮಡಿಕೇರಿ ಮೇ 12 : ನಗರದ ಮಹದೇವಪೇಟೆಯಲ್ಲಿ ಇತ್ತೀಚೆಗೆ ನಡೆದ ಗರ್ಭಿಣಿಯ ಸಾವಿನ ಪ್ರಕರಣದ ಬಗ್ಗೆ ಆಕೆಯ ತಾಯಿ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ತಮ್ಮ ಮಗಳನ್ನು ಆಕೆಯ ಪತಿ ಹಾಗೂ ಮನೆಯವರು ಕೊಲೆ ಮಾಡಿರುವ ಶಂಕೆ ಇದೆ ಎಂದು ಆರೋಪಿಸಿರುವ ಮೃತಳ ತಾಯಿ ವಿ.ಯಶೋಧ, ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರಿ ಭಾಗ್ಯಶ್ರೀ(18) ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪತಿ ಮನೆಯವರಿಂದ ಕಿರುಕುಳ ಇರುವ ಬಗ್ಗೆ ಹೇಳಿಕೊಂಡಿದ್ದಳು ಎಂದು ತಿಳಿಸಿದರು.