ಜಿಲ್ಲಾಡಳಿತ ವತಿಯಿಂದ ‘ಫೋನ್ ಇನ್’ ಕಾರ್ಯಕ್ರಮ

13/05/2020

ಮಡಿಕೇರಿ ಮೇ 12 : ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರ ಕಾರ್ಯಾಲಯದ ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ 1077ಗೆ ಹಲವಾರು ದೂರುಗಳು ಸಾರ್ವಜನಿಕರಿಂದ ಸ್ವೀಕೃತವಾಗುತ್ತಿದೆ. ಆ ದಿಸೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಕ್ಷಿಪ್ರಗತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ‘ನೇರ ಫೋನ್ ಇನ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಆ ನಿಟ್ಟಿನಲ್ಲಿ ಮೇ 14 ರಂದು ಕಾರ್ಮಿಕ ಇಲಾಖೆ, ಮೇ 16 ರಂದು ಸಹಕಾರ ಸಂಘಗಳ ಇಲಾಖೆ, ಮೇ 18 ರಂದು ಅಬಕಾರಿ ಇಲಾಖೆ, ಮೇ 20 ರಂದು ಪಶು ಸಂಗೋಪನಾ ಇಲಾಖೆ, ಮೇ 22 ರಂದು ಸೆಸ್ಕ್ (ಚಾ.ವಿ.ಸ.ನಿ.ನಿ), ಮೇ 26 ರಂದು ಕೆಎಸ್‍ಆರ್‍ಟಿಸಿ, ಮೇ 28 ರಂದು ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಮೇ 30 ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಫೆÇೀನ್ ಇನ್ ಕಾರ್ಯಕ್ರಮವು ಆಯಾಯ ದಿನಗಳಂದು ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯ ವರೆಗೆ ನಡೆಯಲಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.