ಒಂದೇ ದಿನ 63 ಮಂದಿಗೆ ಸೋಂಕು

13/05/2020

ಬೆಂಗಳೂರು ಮೇ 12 : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನವೇ ಬರೋಬ್ಬರಿ 63 ಮಂದಿಗೆ ಪಾಸಿಟಿವ್ ದೃಢುಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.
ಇನ್ನು ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ಮಹಾಮಾರಿ ಗ್ರೀನ್ ಝೋನ್ ಜಿಲ್ಲೆಗಳಿಗೂ ವ್ಯಾಪಿಸುತ್ತಿದ್ದು, ಇಂದು ಕೋಲಾರಕ್ಕೂ ಕೊರೋನಾ ವಕ್ಕರಿಸಿದೆ.
ಇಂದು ಬಾಗಲಕೋಟೆಯಿಂದ 15, ದಾವಣಗೆರೆಯಿಂದ 12, ಧಾರವಾಡದಿಂದ 9, ಹಾಸನದಿಂದ 5, ಕೋಲಾರದಲ್ಲಿ 5, ಬೆಂಗಳೂರು ನಗರದಲ್ಲಿ 4, ಗದಗದಲ್ಲಿ 3, ಯಾದಗಿರಿ 2, ಬೀದರ್ 2, ದಕ್ಷಿಣ ಕನ್ನಡ 2, ಕಲಬುರ್ಗಿ1, ಚಿಕ್ಕಬಳ್ಳಾಪುರ 1, ಬಳ್ಳಾರಿ1 ಹಾಗೂ ಮಂಡ್ಯದಲ್ಲಿ 1 ಪ್ರಕರಣಗಳು ವರದಿಯಾಗಿವೆ.  ಯಾದಗಿರಿ, ಮಂಡ್ಯ, ಬಾಗಲಕೋಟೆ, ಧಾರವಾಡ , ಹಾಸನ, ಗದಗ, ಕೋಲಾರ , ದಾವಣಗೆರೆ ಜಿಲ್ಲೆಗಳಿಗೆ ಅಹಮದಾಬಾದ್, ಮುಂಬೈ, ಒಡಿಶಾ, ಚೆನ್ನೈ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳವರಲ್ಲಿ ಸೋಂಕು ಪತ್ತೆಯಾಗಿದೆ.