ಚೀನಾದಿಂದ ಆಕ್ರಮಣಕಾರಿ ಕೃತ್ಯ

13/05/2020

ಲಡಾಖ್ ಮೇ 12 : ಕೊರೋನಾ ಮಹಾಮಾರಿಯನ್ನು ಬಿಟ್ಟಿದ್ದಲ್ಲದೆ ಚೀನಾ ಮತ್ತೊಮ್ಮೆ ಅಕ್ರಮಣಕಾರಿ ಕೃತ್ಯದಲ್ಲಿ ಭಾಗಿಯಾಗಿದೆ. ಇತ್ತೀಚಿಗೆ ಸಿಕ್ಕಿಂನ ನಾಕು ಲಾ ಪಾಸ್ ವಲಯದಲ್ಲಿ ಭಾರತೀಯ ಸೇನೆಯೊಂದಿಗೆ ಘರ್ಷಣೆಗೆ ಇಳಿದಿದ್ದ ಚೀನಾ ಪಡೆಗಳು, ಮತ್ತೊಮ್ಮೆ ಪ್ರಚೋದಾನಾತ್ಮಕ ಕೃತ್ಯ ನಡೆಸಿವೆ.
ವಾಸ್ತವ ಗಡಿ ರೇಖೆಯ ಅತಿ ಸಮೀಪದಲ್ಲಿ ಲಡಾಕ್ ವಾಯು ಪ್ರದೇಶಗಳ ಮೇಲೆ ಚೀನಾ ಸೇನಾ ಹೆಲಿಕಾಪ್ಟರ್‍ಗಳು ಹಾರಾಟ ನಡೆಸಿವೆ. ಇದನ್ನು ಗಮನಿಸಿದ ಕೂಡಲೇ ಜಾಗೃತಗೊಂಡ ಭಾರತೀಯ ವಾಯುಪಡೆ ತನ್ನ ಯುದ್ದ ವಿಮಾನಗಳನ್ನು ತಕ್ಷಣ ಗಸ್ತಿಗೆ ರವಾನಿಸಿದೆ. ಈ ಘಟನೆ ಕಳೆದ ವಾರ ನಡೆದಂತೆ ಕಂಡುಬರುತ್ತಿದೆ.
ವಾಸ್ತ ಗಡಿ ರೇಖೆ (ಎಲ್‍ಎಸಿ) ಬಳಿ ಚೀನಾದ ಸೇನಾ ಹೆಲಿಕಾಪ್ಟರ್ಗಳು ಹಾರಾಡಿದ ತಕ್ಷಣ ಭಾರತ ವಾಯುಪಡೆ ಕೂಡಲೇ ಸ್ಪಂದಿಸಿದೆ. ಕೂಡಲೇ ಯುದ್ದ ವಿಮಾನಗಳನ್ನು ಗಸ್ತಿಗೆ ರವಾನಿಸಿರುವುದು ಇದೇ ಮೊದಲ ಬಾರಿ ಎಂದು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ.

ಸುಖೋಯ್ 30 ಏಮ್ ಕೆ ಐ ಫೈಟರ್ ಏರ್ ಕ್ರಾಪ್ಟರ್ ಗಳ ಮೂಲಕ ಗಸ್ತು ನಡೆಸುವ ಮೂಲಕ ಭಾರತೀಯ ವಾಯುಪಡೆ ಚೀನಾ ಸೇನೆಗೆ ಬಲಿಷ್ಠ ಪ್ರತ್ಯುತ್ತರ ನೀಡಿದೆ.