ಸಬ್ ಇನ್ಸ್‍ಪೆಕ್ಟರ್ ಆತ್ಮಹತ್ಯೆಗೆ ಶರಣು

13/05/2020

ಶ್ರೀನಗರ ಮೇ 12 : ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿ ಎಫ್)ಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಫತೇಸಿಂಗ್ ಎಂಬುವವರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
ತಮ್ಮ ಸರ್ವೀಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಫತೇ ಸಿಂಗ್ ಅವರನ್ನು ಇತರೆ ಯೋಧರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ, ಈಗಾಗಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಜಮ್ಮುವಿನ ಅಕ್ನೂರ್ ನವರಾದ ಫತೇ ಸಿಂಗ್ ಆತ್ಮಹತ್ಯೆಗೆ ಮೊದಲು ಒಂದು ಪತ್ರ ಬರೆದಿದ್ದಾರೆ. ತಾನು ಕೊರೊನಾಗೆ ಭಯಭೀತಗೊಂಡಿದ್ದೇನೆ ಎಂದು ಸುಸೈಡ್ ಪತ್ರದಲ್ಲಿ ಬರೆದಿದ್ದಾರೆ. ಘಟನೆ ಬಗ್ಗೆ ವಿಚಾರಣೆಗೆ ಉನ್ನತ ಅಧಿಕಾರಿಗಳು ಆದೇಶಿಸಿದ್ದಾರೆ.