ಬಾಯ್ಲರ್ ಸ್ಫೋಟ : ಇಬ್ಬರ ಸಾವು

13/05/2020

ನವದೆಹಲಿ ಮೇ 12 : ಕಳೆದ ವಾರ ಎನ್‍ಎಲ್‍ಸಿ ಇಂಡಿಯಾದ ಥರ್ಮಲ್ ಪ್ಲಾಂಟ್‍ನಲ್ಲಿ ಸಂಭವಿಸಿದ್ದ ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಎಂಟು ಕಾರ್ಮಿಕರ ಪೈಕಿ ಇಬ್ಬರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಉಳಿದ ಆರು ಗಾಯಾಳುಗಳ ಪೈಕಿ ಒಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಮೃತರು ಖಾಯಂ ಉದ್ಯೋಗಿ ಅಥವಾ ಗುತ್ತಿಗೆ ನೌಕರರೆ ಆಗಿರಲಿ ಅವರ ಕುಟುಂಬಕ್ಕೆ ಕನಿಷ್ಠ 15 ಲಕ್ಷ ರೂ.ಪರಿಹಾರ ನೀಡುವಂತೆ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು ಆದೇಶಿಸಿದ್ದಾರೆ.
ಪರಿಹಾರದ ಜೊತೆಗೆ, ಕಂಪನಿಯು ಮೃತರ ರಕ್ತಸಂಬಂಧಿಗಳಿಗೆ ಖಾಯಂ ಉದ್ಯೋಗವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.