ವಿಶ್ವಕಪ್ ಅರ್ಹತಾ ಪಂದ್ಯ ಮುಂದೂಡಿಕೆ

13/05/2020

ನವದೆಹಲಿ ಮೇ 12 : ಕೊರೊನಾ ವೈರಸ್ ಕೋವಿಡ್ -19 ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2021 ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ.
ಈ ಅರ್ಹತಾ ಪಂದ್ಯಗಳು ಜುಲೈನಲ್ಲಿ ನಡೆಯಬೇಕಿತ್ತು. ಐಸಿಸಿ ಮಂಗಳವಾರ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಜುಲೈ 3–19 ರಿಂದ ಶ್ರೀಲಂಕಾದಲ್ಲಿ ಮಹಿಳಾ ಅರ್ಹತಾ ಪಂದ್ಯಗಳು ನಡೆಯಬೇಕಿತ್ತು. ಇಲ್ಲಿ ಜಯ ಸಾಧಿಸಿದ ತಂಡಗಳು ನ್ಯೂಜಿಲೆಂಡ್‍ನಲ್ಲಿ ನಡೆಯಲಿರುವ 2021 ರ ಪಂದ್ಯಾವಳಿಗೆ ಅರ್ಹತೆ ಪಡೆಯಲಿದ್ದವು.
19 ವರ್ಷದೊಳಗಿನವರ ವಿಶ್ವಕಪ್‍ನ ಯುರೋಪಿಯನ್ ಪ್ರಾದೇಶಿಕ ಅರ್ಹತಾ ಪಂದ್ಯವು ಡೆನ್ಮಾರ್ಕ್‍ನಲ್ಲಿ ಜುಲೈ 24 ರಿಂದ 30 ರವರೆಗೆ ನಡೆಯಬೇಕಿತ್ತು. ಈ ಪಂದ್ಯಗಳನ್ನೂ ಸಹ ಮುಂದೂಡಲಾಗಿದೆ.