ಸೋಮವಾರಪೇಟೆಯಲ್ಲಿ ಬ್ರಾಹ್ಮಣ ಅರ್ಚಕರಿಗೆ ಆಹಾರ ಕಿಟ್ ವಿತರಣೆ

13/05/2020

ಮಡಿಕೇರಿ ಮೇ 13 : ಸೋಮವಾರಪೇಟೆ ಸುತ್ತ ಮುತ್ತಲಿನ 32 ಬ್ರಾಹ್ಮಣ ಅರ್ಚಕರಿಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ  ಆಹಾರ ಕಿಟ್ ವಿತರಿಸಲಾಯಿತು.
ಮಾಧ್ಯಮ ಸ್ಪಂದನ ಕೋರಿಕೆಯಂತೆ ಬೋಧಸ್ವರೂಪನಂದ ಮಹಾರಾಜ್ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.
ಸೋಮೇಶ್ವರ ದೇವಾಲಯ ಆವರಣದಲ್ಲಿ ಕಿಟ್ ವಿತರಣೆ ಮಾಡಲಾಯಿತು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎಸ್. ಆರ್. ಶ್ರೀನಿವಾಸ್, ಹಿರಿಯ ಪತ್ರಕರ್ತರಾದ ಬಿ.ಜಿ. ಅನಂತಶಯನ, ಪ್ರಮುಖರಾದ ಅಂಬೆಕಲ್ ಕುಶಾಲಪ್ಪ, ಸಂಪತ್ ಕುಮಾರ್, ಮಾಧ್ಯಮ ಸ್ಪಂದನ ತಂಡದ ಎಸ್.ಎ. ಮುರಳಿಧರ್, ಎಸ್.ಡಿ. ವಿಜೇತ್, ಪ್ರಮುಖರಾದ ವಿಜಯ್ ಹಾನಗಲ್, ಬಿ.ಎಸ್. ಸದಾನಂದ್, ಎಸ್. ಎನ್. ಸೋಮಶೇಖರ್ ಮತ್ತಿತರರು ಇದ್ದರು.